ಸಾರಾಂಶ
ಕೌಲಾಲಂಪುರ: ಸ್ಥಳೀಯ ದೇಗುಲದ ಅರ್ಚಕರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲೇಷ್ಯಾದ ತಮಿಳು ನಟಿ ಲಿಶಾಲಿನಿ ಕನರನ್ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚೆನ್ನೈನಲ್ಲಿ ದೂರು ದಾಖಲಾಗಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನುಭವ ಬರೆದುಕೊಂಡಿರುವ ನಟಿ, ‘ನಾನು ಜೂ.21ರಂದು ಮಲೇಷ್ಯಾದ ಮಾರಿಯಮ್ಮ ಗುಡಿಗೆ ಹೋಗಿದ್ದೆ.
ಅಲ್ಲಿ ಪೂಜೆ ಮಾಡಿಸಿದ ಬಳಿಕ ತಾತ್ಕಾಲಿಕವಾಗಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಮೂಲದ ಪುರೋಹಿತರು ನನ್ನನ್ನು ಪ್ರತ್ಯೇಕವಾಗಿ ಕೋಣೆಯೊಂದಕ್ಕೆ ಕರೆದರು. ಕೋಣೆಯೊಳಗೆ ಹೋದಾಗ ನನ್ನ ಮೇಲೆ ಅತಿ ಘಾಟು ಇರುವ ದ್ರವ್ಯ ಹಾಕಿ ‘ಇದು ಎಲ್ಲರಿಗೂ ಹಾಕುವುದಲ್ಲ’ ಎಂದು, ನನ್ನ ಅನುಮತಿ ಇಲ್ಲದೇ ನನ್ನ ರವಿಕೆ ಒಳಗೆ ಕೈ ಹಾಕಿ ಅಸಭ್ಯವಾಗಿ ಸ್ಪರ್ಶಿಸಿದರು. ಇದು ತಪ್ಪು ಎಂದು ತಿಳಿದರೂ ನನಗೆ ಏನೂ ಸ್ತಬ್ಧಳಾದೆ’ ಎಂದು ಹಂಚಿಕೊಂಡಿದ್ದಾರೆ. ಬಳಿಕ ಚೆನ್ನೈಗೆ ಬಂದ ಮೇಲೆ ಪ್ರಕರಣ ದಾಖಲಿಸಿದೆ. ಈ ವಿಷಯ ತಿಳಿದು ನನಗೆ ಕಿರುಕುಳ ನೀಡಿದ್ದ ಆರೋಪಿ ದೇಗುಲದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಎಂದು ನಟಿ ಹೇಳಿದ್ದಾರೆ.