ಸಾರಾಂಶ
ನಮ್ಮ ಸ್ಪರ್ಧೆ ಭಾರತದ ನಗರಗಳಾದ ಬೆಂಗಳೂರು, ಮುಂಬೈ, ಅಹಮದಾಬಾದ್ ಜತೆಗಲ್ಲ. ನಮ್ಮದೇನಿದ್ದರೂ ಜಾಗತಿಕ ಖ್ಯಾತಿಯ ನಗರಗಳಾದ ಅಮೆರಿಕದ ನ್ಯೂಯಾರ್ಕ್, ದಕ್ಷಿಣ ಕೊರಿಯಾದ ಸೋಲ್ ಅಥವಾ ಜಪಾನ್‌ನ ಟೋಕಿಯಾ ನಗರಗಳೊಂದಿಗೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ನವದೆಹಲಿ: ನಮ್ಮ ಸ್ಪರ್ಧೆ ಭಾರತದ ನಗರಗಳಾದ ಬೆಂಗಳೂರು, ಮುಂಬೈ, ಅಹಮದಾಬಾದ್ ಜತೆಗಲ್ಲ. ನಮ್ಮದೇನಿದ್ದರೂ ಜಾಗತಿಕ ಖ್ಯಾತಿಯ ನಗರಗಳಾದ ಅಮೆರಿಕದ ನ್ಯೂಯಾರ್ಕ್, ದಕ್ಷಿಣ ಕೊರಿಯಾದ ಸೋಲ್ ಅಥವಾ ಜಪಾನ್‌ನ ಟೋಕಿಯಾ ನಗರಗಳೊಂದಿಗೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ಇಲ್ಲಿ ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಭಾರತದ ಜತೆ ಸ್ಪರ್ಧೆ ಗುರಿ ಹೊಂದಿಲ್ಲ. ನಮ್ಮದೇನಿದ್ದರೂ ಜಾಗತಿಕ ನಗರಗಳ ಜೊತೆಗೆ ಸ್ಪರ್ಧೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ, ಬಂಡವಾಳ ಹೂಡಿಕೆದಾರರಿಗೆ ತಮ್ಮ ತವರು ರಾಜ್ಯ ಗುಜರಾತ್‌ನಲ್ಲೇ ಹೂಡಿಕೆ ಮಾಡುವಂತೆ ನಿರ್ದೇಶಿಸುತ್ತಿದ್ದಾರೆ. ದೇಶದ ಸಮತೋಲಿತ ಅಭಿವೃದ್ಧಿಗೆ ನೆರವು ನೀಡುತ್ತಿಲ್ಲ ಎಂದು ಆರೋಪ ಮಾಡಿದರು.