ನಮೊ ಆ್ಯಪ್‌ ಮೂಲಕ ಪಕ್ಷಕ್ಕೆ ಪ್ರಧಾನಿ ಮೋದಿ 2 ಸಾವಿರ ರು. ದೇಣಿಗೆ

| Published : Mar 04 2024, 01:17 AM IST

ನಮೊ ಆ್ಯಪ್‌ ಮೂಲಕ ಪಕ್ಷಕ್ಕೆ ಪ್ರಧಾನಿ ಮೋದಿ 2 ಸಾವಿರ ರು. ದೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನಮೊ ಆ್ಯಪ್‌ ಮೂಲಕ ಬಿಜೆಪಿ ಪಕ್ಷಕ್ಕೆ 2 ಸಾವಿರ ರು. ದೇಣಿಗೆ ನೀಡಿದ್ದು, ಇತರರಿಗೂ ನೀಡಲು ಕರೆ ನೀಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಮೊ ಆ್ಯಪ್‌ ಮೂಲಕ ಬಿಜೆಪಿ ಪಕ್ಷಕ್ಕೆ 2 ಸಾವಿರ ರು. ದೇಣಿಗೆ ನೀಡಿದ್ದು, ಇತರರು ಸಹ ರಾಷ್ಟ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ದೇಣಿಗೆ ನೀಡುವಂತೆ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ, ‘ವಿಕಸಿತ ಭಾರತ ನಿರ್ಮಿಸಲು ಬಿಜೆಪಿಗೆ ನಾನು 2 ಸಾವಿರ ರು. ದೇಣಿಗೆ ನೀಡಿದ್ದೇನೆ ಎಂದು ತಿಳಿಸಲು ಹರ್ಷವಾಗುತ್ತಿದೆ. ನೀವು ಸಹ ದೇಣಿಗೆ ನೀಡಿ ರಾಷ್ಟ್ರದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಿ’ ಎಂದು ರಸೀತಿಯನ್ನೂ ಸಹ ಟ್ಯಾಗ್‌ ಮಾಡಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ ಬೆನ್ನಲ್ಲೆ ನರೇಂದ್ರ ಮೋದಿ ಬಿಜೆಪಿಗೆ ದೇಣಿಗೆ ನೀಡುವಂತೆ ಕರೆ ನೀಡುವ ಮೂಲಕ ಪಕ್ಷದ ಸಂಪನ್ಮೂಲವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.