ಸಾರಾಂಶ
ನವದೆಹಲಿ: ‘ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದ್ದರಿಂದ ಕಳೆದ 11 ವರ್ಷಗಳಲ್ಲಿ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.
ಶನಿವಾರ 16ನೇ ಆವೃತ್ತಿಯ ರೋಜಗಾರ್ ಮೇಳದಲ್ಲಿ 51,000ಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಿ, ವರ್ಚುವಲ್ ಮೂಲಕ ಅವರು ಮಾತನಾಡಿದರು.
‘ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, 10 ಕೋಟಿಗೂ ಹೆಚ್ಚು ಹೊಸ ಎಲ್‌ಪಿಜಿ ಸಂಪರ್ಕ, ಸೌರಶಕ್ತಿ ಮೇಲ್ಛಾವಣಿ ಯೋಜನೆ ಮೊದಲಾದ ಸರ್ಕಾರೀ ಯೋಜನೆಗಳು ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ. 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯು 5 ಪಟ್ಟು ಹೆಚ್ಚಾಗಿ 11 ಲಕ್ಷ ಕೋಟಿ ರು.ಗಳಿಗೆ ತಲುಪಿದೆ. ಈ ಮೊದಲು 2-4 ಇದ್ದ ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ ಸುಮಾರು 300ಕ್ಕೆ ತಲುಪಿದೆ’ ಎಂದು ತಿಳಿಸಿದರು.