ಸಾರಾಂಶ
ಗಲಭೆಗೆ ಒಳಗಾದ ನಂತರ ಮೊದಲ ಬಾರಿ ಮಣಿಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗಲಭೆಪೀಡಿತ ಸ್ಥಳಗಳಲ್ಲಿ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗದಲ್ಲೇ ಸಾಗಿದ್ದು ವಿಶಷವಾಗಿತ್ತು.
- ಮಳೆಯನ್ನೂ ಲೆಕ್ಕಿಸದೇ ಪ್ರಧಾನಿ ಮಣಿಪುರ ಭೇಟಿ
- ಮಳೆಯಲ್ಲೂ ಇಷ್ಟು ಜನ ಸೇರಿದ್ದು ಸಂತಸ ತಂದಿದೆ- ಈ ಕ್ಷಣವನ್ನು ನಾನು ಮೆರಯಲು ಆಗದು: ಪ್ರಧಾನಿ ಸಂತಸಇಂಫಾಲ: ಗಲಭೆಗೆ ಒಳಗಾದ ನಂತರ ಮೊದಲ ಬಾರಿ ಮಣಿಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗಲಭೆಪೀಡಿತ ಸ್ಥಳಗಳಲ್ಲಿ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗದಲ್ಲೇ ಸಾಗಿದ್ದು ವಿಶಷವಾಗಿತ್ತು.
ಇಂಫಾಲಕ್ಕೆ ಮೋದಿ ವಿಮಾನದಲ್ಲಿ ಬಂದ ನಂತರ ಹೆಲಿಕಾಪ್ಟರಲ್ಲಿ ಅವರು ಚುರಾಚಾಂದ್‌ಪುರಕ್ಕೆ ತೆರಳಬೇಕಿತ್ತು. ಆದರೆ ಭಾರಿ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸದಂತೆ ಅಧಿಕಾರಿಗಳು ಪ್ರಧಾನಿ ಮೋದಿಗೆ ಸಲಹೆ ನೀಡಿದರು. ಆಗ ಮೋದಿ ರಸ್ತೆ ಮೂಲಕ ತಲುಪಲು ನಿರ್ಧರಿಸಿ ಸುಮಾರು 1.5 ತಾಸು ಕಾಲ ಕಾರಲ್ಲೇ ಸಾಗಿದರು.ಬಳಿಕ ಚುರಾಚಾಂದ್‌ಪುರಕ್ಕೆ ಬಂದ ಅವರು, ‘ಮಣಿಪುರದ ಜನರ ಮನೋಭಾವಕ್ಕೆ ನಾನು ನಮಸ್ಕರಿಸುತ್ತೇನೆ. ಇಷ್ಟು ಭಾರೀ ಮಳೆಯಲ್ಲೂ ನೀವು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದೀರಿ. ನನ್ನ ಹೆಲಿಕಾಪ್ಟರ್ ಹಾರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ರಸ್ತೆಯ ಮೂಲಕ ಬಂದೆ. ದಾರಿಯುದ್ದಕ್ಕೂ ನಾನು ಕಂಡ ಪ್ರೀತಿ ಮತ್ತು ವಾತ್ಸಲ್ಯ, ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದ ಜನರು ಹಾಗೂ ಈ ಕ್ಷಣವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ’ ಎಂದು ಮಳೆಯನ್ನೂ ಲೆಕ್ಕಿಸದೆ ನೆರೆದಿದ್ದ ಸಾವಿರಾರು ಜನಸಮೂಹವನ್ನು ಉದ್ದೇಶಿಸಿ ಹೇಳಿದರು.