ನಿನ್ನ ಪ್ರೀತಿ ದಕ್ಕಿದೆ, ಕೈ ಇಳಿಸು: ಹುಡುಗನಿಗೆ ಮೋದಿ ಕರೆ

| Published : Feb 12 2024, 01:36 AM IST / Updated: Feb 12 2024, 08:41 AM IST

Narendra Modi

ಸಾರಾಂಶ

ನಿನ್ನ ಪ್ರೀತಿ ನನಗೆ ದಕ್ಕಿದೆ. ನಿನ್ನ ಕೈ ನೋಯಿಸಿಕೊಳ್ಳಬೇಡ ಎಂದು ಕೈಬೀಸುತ್ತಿದ್ದ ಮಗುವಿಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಝಬುವಾ (ಮ.ಪ್ರ.): ಸಾರ್ವಜನಿಕ ರ್‍ಯಾಲಿಯೊಂದರಲ್ಲಿ ದೀರ್ಘ ಕಾಲದಿಂದ ತಮ್ಮತ್ತ ಕೈ ಬೀಸುತ್ತಿದ್ದ ಹುಡುಗನತ್ತ ಗಮನ ಹರಿಸಿದ ಪ್ರಧಾನಿ ನರೇಂದ್ರ ಮೋದಿ ‘ದಯವಿಟ್ಟು ಕೈ ಇಳಿಸು. ನಿನ್ನ ಪ್ರೀತಿ ನನಗೆ ಲಭಿಸಿದೆ.

ನೀನು ತುಂಬಾ ಹೊತ್ತು ಕೈ ಬೀಸಿ ನೋಯಿಸಿಕೊಂಡರೆ ನನ್ನ ಮನಸ್ಸಿಗೆ ನೋವುಂಟಾಗುತ್ತದೆ’ ಎಂದು ಹೇಳಿದ ಭಾವನಾತ್ಮಕ ಪ್ರಸಂಗ ಮಧ್ಯಪ್ರದೇಶದ ಝಬುವಾದಲ್ಲಿ ನಡೆದಿದೆ. 

ನಗರದ ಜನ್‌ಜತೀಯ ಮಹಾಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ. 

ತನ್ನ ಮಗ ಪ್ರಧಾನಿ ಮೋದಿಗೆ ಕೈ ಬೀಸಬೇಕೆಂದು ಪೋಷಕನೊಬ್ಬ ತನ್ನ ಎರಡೂ ಕೈಗಳಲ್ಲಿ ಹುಡುಗನ ಕೈ ಎತ್ತಿ ಬಹಳ ಹೊತ್ತು ಎತ್ತಿ ನಿಂತಿದ್ದನು.