ಅದಾನಿಯಿಂದ ರಾಹುಲ್‌ ಹಣ ಪಡೆದಿದ್ದಕ್ಕೆಅಧೀರ್‌ ಸಾಕ್ಷಿ ಎಂದು ಪ್ರಧಾನಿ ಮೋದಿ ಆರೋಪಿಸಿದ್ದು, ತಮಗೂ ಕೊಟ್ಟರೆ ಬೈಗುಳ ನಿಲ್ಲಿಸುವುದಾಗಿ ಹೇಳಿದ್ದ ಅಧೀರ್‌ ಹೇಳಿಕೆಯನ್ನು ಉಲ್ಲೇಖಿಸಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಭುವನೇಶ್ವರ: ಅಂಬಾನಿ-ಅದಾನಿಗಳಿಂದ ಹಣ ಪಡೆದ ಹಿನ್ನೆಲೆಯಲ್ಲಿ ಚುನಾವಣೆ ಸಮಯದಲ್ಲಿ ರಾಹುಲ್‌ ಗಾಂಧಿ ಅವರ ಕುರಿತು ಆರೋಪಿಸುವುದನ್ನು ಏಕಾಏಕಿ ನಿಲ್ಲಿಸಿದ್ದಾರೆ ಎಂದು ತಾವು ಸಂಶಯ ವ್ಯಕ್ತಪಡಿಸಿದ್ದನ್ನು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಸಾಬೀತು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಪಿಟಿಐಗೆ ಸಂದರ್ಶನ ನೀಡಿದ ಮೋದಿ, ಅಧೀರ್‌ ರಂಜನ್‌ ಅವರ ‘ನಮಗೂ ಲಾರಿಗಟ್ಟಲೆ ಹಣ ಕಳುಹಿಸಿದಲ್ಲಿ ಅಂಬಾನಿ-ಅದಾನಿ ಕುರಿತು ಆರೋಪಿಸುವುದಿಲ್ಲ’ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದರು.

‘ರಾಹುಲ್‌ ಗಾಂಧಿ ಉದ್ಯಮಿಗಳ ಕುರಿತು ಮೌನ ವಹಿಸಿದ್ದಕ್ಕೆ ಕೇವಲ ಸಂಶಯ ಮಾತ್ರ ವ್ಯಕ್ತಪಡಿಸಿದ್ದೆ.

ಆದರೆ ಅಧೀರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿ ಸತ್ಯ ಬಾಯ್ಬಿಟ್ಟಿದ್ದಾರೆ’ ಎಂದು ತಿಳಿಸಿದರು.