ಮುಂಬೈಗೆ 14 ಉಗ್ರರ ಎಂಟ್ರಿ: ಬೆದರಿಕೆ

| Published : Sep 06 2025, 01:00 AM IST

ಸಾರಾಂಶ

ವಾಣಿಜ್ಯ ನಗರಿ ಮುಂಬೈನಲ್ಲಿ ಶನಿವಾರದ ಅನಂತ ಚತುರ್ದಶಿ ದಿನ ಗಣೇಶ ವಿಸರ್ಜನೆಗೆ ತಯಾರಿ ನಡೆಯುತ್ತಿರುವ ಹೊತ್ತಲ್ಲಿಯೇ ‘14 ಉಗ್ರರು ,400 ಕೇಜಿ ಆರ್‌ಡಿಎಕ್ಸ್‌ ಜತೆ ಮುಂಬೈ ದಾಳಿಗೆ ಸಿದ್ಧತೆ ಸಿದ್ಧತೆ ನಡೆಸಿದ್ದಾರೆ’ ಎಂದು ಸಂಚಾರಿ ಪೊಲೀಸ್‌ ಕಂಟ್ರೋಲ್ ರೂಂಗೆ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ಸಾರಿದ್ದಾರೆ.

400 ಕೇಜಿ ಅರ್‌ಡಿಎಕ್ಸ್‌ ಜತೆ ಪ್ರವೇಶ

34 ವಾಹನದಲ್ಲಿ ಬಾಂಬ್‌ ಇರಿಸಲಾಗಿದೆ

ಇಷ್ಟು ಆರ್‌ಡಿಎಕ್ಸ್‌ 1 ಕೋಟಿ ಜನರನ್ನು ಸಾಯಿಸಬಲ್ಲದು

ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ

‘ಲಷ್ಕರ್‌ ಎ ಜಿಹಾದಿ’ ಹೆಸರಲ್ಲಿ ರವಾನೆ

ಗಣೇಶ ಹಬ್ಬ ನಡೆದರಿರುವಾಗಲೇ ಧಮಕಿ

ಮುಂಬೈನಾದ್ಯಂತ ಪೊಲೀಸರ ಕಟ್ಟೆಚ್ಚರ

ಪಿಟಿಐ ಮುಂಬೈ

ವಾಣಿಜ್ಯ ನಗರಿ ಮುಂಬೈನಲ್ಲಿ ಶನಿವಾರದ ಅನಂತ ಚತುರ್ದಶಿ ದಿನ ಗಣೇಶ ವಿಸರ್ಜನೆಗೆ ತಯಾರಿ ನಡೆಯುತ್ತಿರುವ ಹೊತ್ತಲ್ಲಿಯೇ ‘14 ಉಗ್ರರು ,400 ಕೇಜಿ ಆರ್‌ಡಿಎಕ್ಸ್‌ ಜತೆ ಮುಂಬೈ ದಾಳಿಗೆ ಸಿದ್ಧತೆ ಸಿದ್ಧತೆ ನಡೆಸಿದ್ದಾರೆ’ ಎಂದು ಸಂಚಾರಿ ಪೊಲೀಸ್‌ ಕಂಟ್ರೋಲ್ ರೂಂಗೆ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ಸಾರಿದ್ದಾರೆ.

ಗುರುವಾರ ಪೊಲೀಸರ ವಾಟ್ಸಾಪ್‌ ಹೆಲ್ಪ್‌ಲೈನ್‌ಗೆ ಸಂದೇಶವೊಂದು ಬಂದಿದೆ. ಇದರದಲ್ಲಿ ಲಷ್ಕರ್‌-ಎ-ಜಿಹಾದಿ ಸಂಘಟನೆ ಹೆಸರಿನ ಉಲ್ಲೇಖವಿದೆ. ‘14 ಉಗ್ರರು ನಗರ ಪ್ರವೇಶಿಸಿದ್ದಾರೆ. 400 ಕೇಜಿ ಆರ್‌ಡಿಎಕ್ಸ್‌ನ್ನು 34 ವಾಹನಗಳಲ್ಲಿ ಇರಿಸಲಾಗಿದ್ದು, ಸ್ಫೋಟಿಸುವ ಸಂಚು ರೂಪಿಸಿದ್ದಾರೆ. ಇಷ್ಟು ಆರ್‌ಡಿಎಕ್ಸ್‌ 1 ಕೋಟಿ ಜನರನ್ನು ಸಾಯಿಸಬಲ್ಲದು’ ಎಂದು ಸಂದೇಶ ಕಳುಹಿಸಿದ್ದಾರೆ. ಈ ಸಂಬಂಧ ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದು, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಸಂಸ್ಥೆಗೂ ಮಾಹಿತಿ ನೀಡಿದೆ. ಮತ್ತೊಂದೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಜತೆಗೆ ಯಾವುದೇ ವದಂತಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ.