ಉತ್ತರ ದೆಹಲಿಯ ಇಂದರ್‌ಲೋಕ್‌ ಪ್ರದೇಶದಲ್ಲಿ ರಸ್ತೆಯ ಮೇಲೇ ನಮಾಜ್‌ ಮಾಡುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರೊಬ್ಬರು ಕಾಲಿನಿಂದ ಒದ್ದ ಘಟನೆ ನಡೆದಿದೆ.

ನವದೆಹಲಿ: ಉತ್ತರ ದೆಹಲಿಯ ಇಂದರ್‌ಲೋಕ್‌ ಪ್ರದೇಶದಲ್ಲಿ ರಸ್ತೆಯ ಮೇಲೇ ನಮಾಜ್‌ ಮಾಡುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರೊಬ್ಬರು ಕಾಲಿನಿಂದ ಒದ್ದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ, ನೂರಾರು ಜನರು ವಾಹನ ದಟ್ಟಣೆಯ ಮಾರ್ಗದ ರಸ್ತೆಯಲ್ಲೇ ನಮಾಜ್‌ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸೊಬ್ಬರು ನಮಾಜ್‌ ಮಾಡುತ್ತಿದ್ದವರಿಗೆ ಕಾಲಿನಿಂದ ಒದ್ದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರಾರ್ಥನೆ ಮಾಡುತ್ತಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ.