ಸಾರಾಂಶ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಚೂರಿ ಇರಿತದ ಕೃತ್ಯಗಳು ಮುಂದುವರೆದಿವೆ, ನಗರದ ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬನಿಂದ 20ಕ್ಕೂ ಹೆಚ್ಚು ಮಂದಿಗೆ ಚಾಕುವಿನಿಂದ ಇರಿದ ಘಟನೆ ಮಾಸುವ ಮುನ್ನವೇ ನಗರದ ಚರ್ಚ್‌ವೊಂದರಲ್ಲಿ ಅಂತಹ ಮತ್ತೊಂದು ಘಟನೆ ನಡೆದಿದೆ.
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಚೂರಿ ಇರಿತದ ಕೃತ್ಯಗಳು ಮುಂದುವರೆದಿವೆ, ನಗರದ ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬನಿಂದ 20ಕ್ಕೂ ಹೆಚ್ಚು ಮಂದಿಗೆ ಚಾಕುವಿನಿಂದ ಇರಿದ ಘಟನೆ ಮಾಸುವ ಮುನ್ನವೇ ನಗರದ ಚರ್ಚ್‌ವೊಂದರಲ್ಲಿ ಅಂತಹ ಮತ್ತೊಂದು ಘಟನೆ ನಡೆದಿದೆ. ಈ ಸಲ ಪಾದ್ರಿಗೆ ಚೂರಿ ಇರಿಯಲಾಗಿದ್ದು, ದಾಳಿಕೋರನನ್ನು ಬಂಧಿಸಲಾಗಿದೆ.
ನಗರದ ಹೊರವಲಯದಲ್ಲಿ ವೇಕ್ಲಿ ಎಂಬ ಪ್ರದೇಶದಲ್ಲಿರುವ ಕ್ರೈಸ್ಟ್ ದಿ ಗುಡ್ ಶೆಫರ್ಡ್ ಎಂಬ ಚರ್ಚ್‌ನಲ್ಲಿ ವ್ಯಕ್ತಿಯೊಬ್ಬ ಪಾದ್ರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸಲಾಗಿದೆ.ಈ ಕುರಿತು ವಿಡಿಯೋ ವೈರಲ್ ಆಗಿದ್ದು, ದೃಶ್ಯಾವಳಿಯಲ್ಲಿ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಪಾದ್ರಿಯ ಬಳಿ ಬಂದು ಹಲವು ಬಾರಿ ಚೂಪಾದ ಆಯುಧದಿಂದ ಇರಿಯುವ ದೃಶ್ಯವಿದೆ. ಬಳಿಕ ಅಲ್ಲಿ ಪ್ರಾರ್ಥನೆಗೆ ಆಗಮಿಸಿದ್ದ ಭಕ್ತಾದಿಗಳು ಪಾದ್ರಿಯ ನೆರವಿಗೆ ಧಾವಿಸಿದ್ದಾರೆ.
ಸಿಡ್ನಿಯ ಬೋಂದಿ ಜಂಕ್ಷನ್‌ನಲ್ಲಿರುವ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥತೆಯಿಂದ ಇರಿತ ಪ್ರಾರಂಭಿಸಿದ ಪರಿಣಾಮ 6 ಜನ ಮೃತಪಟ್ಟು, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಗುಡ್‌ಫ್ರೈಡೆ ಜರುಗಿದ ಕೆಲವೇ ದಿನಗಳ ಬಳಿಕ ಸಿಡ್ನಿಯಲ್ಲಿ ಇಂತಹ ಇರಿತ ಪ್ರಕರಣಗಳು ಮರುಕಳಿಸುತ್ತಿರುವುದು ತುಸು ಆತಂಕ ಮೂಡಿಸಿದೆ.