ಸಾರಾಂಶ
ಮದ್ಯ ಉದ್ಯಮಿ ಪಾಂಟಿ ಚಡ್ಡಾ ದೆಹಲಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 400 ಕೋಟಿ ರು. ಮೌಲ್ಯದ ಫಾರ್ಮ್‌ಹೌಸ್ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೆಲಸಮ ಮಾಡಿದೆ.
ನವದೆಹಲಿ: ಮದ್ಯ ಉದ್ಯಮಿ ಪಾಂಟಿ ಚಡ್ಡಾಗೆ ಸೇರಿದ ಫಾರ್ಮ್‌ಹೌಸ್‌ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೆಲಸಮ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತರ್‌ಪುರದಲ್ಲಿರುವ ಸುಮಾರು 400 ಕೋಟಿ ಮೌಲ್ಯದ ಫಾರ್ಮ್‌ಹೌಸನ್ನು ಶುಕ್ರವಾರ ಮತ್ತು ಶನಿವಾರ ನೆಲಸಮ ಮಾಡಲಾಗಿದೆ.ಅನಧಿಕೃತವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಸರ್ಕಾರಿ ಜಾಗವನ್ನು ಹಿಂಪಡೆಯುವ ಕಾರ್ಯದಲ್ಲಿ ಸುಮಾರು 10 ಎಕರೆಯ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಫಾರ್ಮ್‌ಹೌಸ್ ಅನ್ನು ನೆಲಸಮ ಮಾಡಲಾಗಿದೆ ಎಂದು ಡಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.