ಸಾರಾಂಶ
ಇಲ್ಲಿನ ಪಾರಂಪರಿಕ ಹುಮಾಯೂನ್ ಸಮಾಧಿ ಆವರಣದ ಮಸೀದಿಯೊಂದರ ಮೇಲ್ಛಾವಣಿ ಕುಸಿದು ಐವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಭವಿಸಿದೆ.
ನವದೆಹಲಿ: ಇಲ್ಲಿನ ಪಾರಂಪರಿಕ ಹುಮಾಯೂನ್ ಸಮಾಧಿ ಆವರಣದ ಮಸೀದಿಯೊಂದರ ಮೇಲ್ಛಾವಣಿ ಕುಸಿದು ಐವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಭವಿಸಿದೆ.
ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸುಮಾರು ಸಂಜೆ 4 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದ್ದು, 15-20 ಜನರು ರಕ್ಷಿಸಲಾಗಿದೆ ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಸಿತದ ಮಾಹಿತಿ ಹೊರಬರುತ್ತಿದ್ದಂತೆ ಕೆಲ ಹೊತ್ತು ಹುಮಾಯೂನ್ ಸಮಾಧಿಯ ಗುಮ್ಮಟ ಕುಸಿದಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ಆತಂಕ ದೂರ ಮಾಡಿದ್ದು, 16ನೇ ಶತಮಾನದ ಯುನೆಸ್ಕೋ ಪಾರಂಪರಿಕ ತಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.