4 ತಾಸು ಕಾದು ಬಾಗಿಲು ಮುರಿದ ಪೊಲೀಸರು
ನಡುರಾತ್ರಿಯೇ ದೌಡಾಯಿಸಿದ ದೀದಿಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಕಾಳಿಘಾಟ್‌ನ ಮನೆಯ ಮೇಲೆ ಶುಕ್ರವಾರ ರಾತ್ರಿ 2 ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಭಿಷೇಕ್‌ರ ಆಪ್ತ ಕಾರ್ಯದರ್ಶಿ ಸುಮಿತ್ ರಾಯ್ ವಿರುದ್ಧದ ಸುಲಿಗೆ ಪ್ರಕರಣ ಸಂಬಂಧ ಈ ದಾಳಿ ನಡೆಸಲಾಗಿದೆ. ದಾಳಿ ಸುದ್ದಿ ತಿಳಿಯುತ್ತಲೇ ಮಮತಾ, ಸೋದರಳಿಯನ ನಿವಾಸಕ್ಕೆ ದೌಡಾಯಿಸಿದ್ದು, ಕೆಲಕಾಲ ಹೈಡ್ರಾಮಾ ಸೃಷ್ಟಿಯಾಗಿತ್ತು. ರಾತ್ರೋರಾತ್ರಿ ಬಂದ ಪೊಲೀಸರನ್ನು 4 ತಾಸು ಕಾಯಿಸಲಾಗಿದ್ದರಿಂದ ಕೊನೆಗೆ ಅವರು ಬಾಗಿಲು ಮುರಿದು ಒಳನುಗ್ಗಿದರು ಎನ್ನಲಾಗಿದೆ. ಆ ವೇಳೆ ಬ್ಯಾನರ್ಜಿ ಅವರ ಭದ್ರತಾ ಪಡೆ ಸಿಬ್ಬಂದಿ ತಡೆದರಾದರೂ, ಶೋಧ ಮುಂದುವರಿಯಿತು. ರಾಯ್ ಸಿಗದ ಕಾರಣ ಪೊಲೀಸರು ಬೆಳಗ್ಗೆ 7.30ಕ್ಕೆ ಹೊರಟ ಬಳಿಕ ಮಮತಾ ಕೂಡ ಅಲ್ಲಿಂದ ತೆರಳಿದರು.== ಇದನ್ನು ಟಿಎಂಸಿ ರಾಜಕೀಯ ದ್ವೇಷದ ನಡೆ ಎಂದು ಕರೆದಿದೆ. ಈ ಬಗ್ಗೆ ಅಭಿಷೇಕ್‌ರನ್ನು ಪ್ರಶ್ನಿಸಿದಾಗ, ‘ತನಿಖಾ ಸಂಸ್ಥೆಗಳನ್ನೇ ಕೇಳಿ. ನಾನು ಅವರ ವಕ್ತಾರನಲ್ಲ’ ಎಂಬ ಖಾರವಾದ ಪ್ರತಿಕ್ರಿಯೆ ಬಂದಿದೆ. ಇವರು, ಸಂಸದರ ನಕಲಿ ಸಹಿ ಮಾಡಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.