ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಮಂಡಿಸಲಾಗಿದ್ದ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಗುರುವಾರ ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ಬಳಿಕ ಅಂಗೀಕರಿಸಲಾಯಿತು.
- ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಅಂಗೀಕಾರ
- ಲೀಕ್ ಮಾಡಿದ್ರೆ 10 ವರ್ಷ ಜೈಲು, ₹10 ಕೋಟಿ ದಂಡ-ರಾಷ್ಟ್ರಪತಿ ಅಂಕಿತದ ಬಳಿಕ ಇದು ಕಾಯ್ದೆಯಾಗಿ ಜಾರಿ ನವದೆಹಲಿ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಮಂಡಿಸಲಾಗಿದ್ದ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಗುರುವಾರ ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ಬಳಿಕ ಅಂಗೀಕರಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದಲ್ಲಿ 10 ವರ್ಷ ಜೈಲು ಹಾಗೂ 10 ಕೋಟಿ ರು.ವರೆಗೆ ದಂಡದಂತಹ ಕಠಿಣ ಶಿಕ್ಷೆ ವಿಧಿಸುವ ಈ ಮಸೂದೆ ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಇದೀಗ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಕಾಯ್ದೆಯಾಗಿ ಜಾರಿಗೆ ಬರಲಿದೆ.ಗುರುವಾರ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿ, ನಂತರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ‘ಈ ಕಠಿಣ ಶಾಸನವು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಹಾಗೂ ಯುವಜನರ ಹಿತಾಸಕ್ತಿ ಮತ್ತು ಭವಿಷ್ಯವನ್ನು ಕಾಯುವಲ್ಲಿ ಸರ್ಕಾರದ ಅತ್ಯುನ್ನತ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಹಿರಿಯರ ಹಾಗೂ ಪ್ರಬುದ್ಧರ ಸದನವಾದ ರಾಜ್ಯಸಭೆಯು ಇದನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. ಬಳಿಕ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಪರೀಕ್ಷೆಗಳಲ್ಲಿನ ಅಕ್ರಮ ತಡೆಯಲು 2024ರಲ್ಲಿ ಮೊದಲ ಬಾರಿ ಈ ಕಾನೂನನ್ನು ಪರಿಚಯಿಸಲಾಗಿತ್ತು. ಇದಕ್ಕೀಗ ತಿದ್ದುಪಡಿ ತಂದು ಇನ್ನೂ ಕಠಿಣಗೊಳಿಸಲಾಗಿದೆ.===ಮಸೂದೆಯಲ್ಲೇನಿದೆ?:- ಪ್ರಸ್ತುತ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರು. ವರೆಗೆ ದಂಡ ಇದೆ- ಇದು 5ರಿಂದ 10 ವರ್ಷ ಸೆರೆವಾಸ, 50 ಲಕ್ಷ ರು. ದಂಡಕ್ಕೆ ಏರಿಕೆ
- ಇನ್ನು ಸೋರಿಕೆ ರೂವಾರಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, 10 ಕೋಟಿ ರು. ದಂಡ- ಸಂಘಟಿತ ಅಪರಾಧ ಪ್ರಕರಣಗಳಲ್ಲಿ ಕನಿಷ್ಠ 7 ವರ್ಷ ಜೈಲು, 10 ಕೋಟಿ ರು. ದಂಡ- ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಗೊತ್ತಿದ್ದೂ ಮುಚ್ಚಿಟ್ಟರೆ 1 ಕೋಟಿ ರು. ವರೆಗೆ ದಂಡ- ಪೇಪರ್ ಲೀಕ್ ವಿಚಾರಣೆಗಾಗಿ ತ್ವರಿತ ಕೋರ್ಟ್ ಸ್ಥಾಪನೆ
-ನಿತ್ಯ ವಿಚಾರಣೆ. 3 ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಿ ಶಿಕ್ಷೆ ಪ್ರಕಟಿಸಬೇಕು-ತನಿಖೆಗಾಗಿ ವಿಶೇಷ ಕಾರ್ಯಪಡೆ ರಚಿಸಲು ಕೇಂದ್ರಕ್ಕೂ ಅಧಿಕಾರ-ಅಪರಾಧಗಳ ತನಿಖೆಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸಬೇಕು=
ಪೇಪರ್ ಲೀಕ್ ಮಾಫಿಯಾಗೆ ಬ್ರೇಕ್: ಮೋದಿ- 4ನೇ ಇನ್‌ಸ್ಟಾ ವಿಡಿಯೋದಲ್ಲಿ ಪ್ರಧಾನಿ ಹರ್ಷನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ತಿದ್ದುಪಡಿ ಮಸೂದೆ ಪಾಸ್ ಆಗುತ್ತಿದ್ದಂತೆಯೇ ಯುವಕರನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಡರಾತ್ರಿ 4ನೇ ಇನ್‌ಸ್ಟಾಗ್ರಾಂ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಮಸೂದೆ ಪೇಪರ್ ಲೀಕ್ ಮಾಫಿಯಾಗೆ ಬ್ರೇಕ್ ಹಾಕಲಿದೆ ಎಂದಿದ್ದಾರೆ.‘ಅನೇಕ ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತಿದೆ. ಮಕ್ಕಳು ಸಂಕಟಕ್ಕೀಡಾಗಿದ್ದಾರೆ. ಆದರೆ ಮತ್ತೆ ಪೇಪರ್ ಮಾಫಿಯಾವನ್ನು ಈಗ ಸಹಿಸುವುದಿಲ್ಲ. ಅದಕ್ಕೇ 2 ದಿನ ಸಂಸತ್ತಿನ 2 ಸದನದಲ್ಲಿ ಚರ್ಚೆ ನಡೆಸಿ ಬಿಲ್ ಪಾಸು ಮಾಡಿದ್ದೇವೆ. ಕಠಿಣ ಪರೀಕ್ಷಾ ಪದ್ಧತಿಗೆ ಒಂದಾದ ಮೇಲೊಂದು ಕ್ರಮ ಕೈಗೊಂಡಿದ್ದೇವೆ. ಟಾಸ್ಕ್ ಫೋರ್ಸ್, ತ್ವರಿತ ಕೋರ್ಟ್ ಸ್ಥಾಪನೆಗೆ ಅನೇಕ ಕ್ರಮ ಕೈಗೊಂಡಿದ್ದೇವೆ. ಮಹತ್ವದ ಕೆಲಸವಾಗಿದೆ. ಇಂಥ ಕೆಲಸ ಮುಂದುವರಿಯುತ್ತೇವೆ. ನಾವೆಲ್ಲ ವಿಕಸಿತ ಭಾರತದ ಕನಸು ನನಸು ಮಾಡೋಣ’ ಎಂದಿದ್ದಾರೆ.