25 ಜನರನ್ನು ಬಲಿ ಪಡೆದ ಗೋವಾ ಪಬ್ ದುರಂತ ಸಂಭವಿಸುವ ವೇಳೆ ಪಬ್‌ನೊಳಗೆ ಶೋಲೆ ಚಿತ್ರದ ಮೆಹಬೂಬಾ..... ಮೆಹಬೂಬಾ ಹಾಡಿನ ಅಬ್ಬರ ಆವರಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್ ಕ್ಲಬ್‌ನಲ್ಲಿ ಶೋಲೆ ಸಿನಿಮಾದ ‘ಮೆಹಬೂಬಾ...ಮೆಹಬೂಬಾ...’ ಹಾಡಿನ ಅಬ್ಬರ ಆವರಿಸಿತ್ತು.
ಪಣಜಿ: 25 ಜನರನ್ನು ಬಲಿ ಪಡೆದ ಗೋವಾ ಪಬ್ ದುರಂತ ಸಂಭವಿಸುವ ವೇಳೆ ಪಬ್‌ನೊಳಗೆ ಶೋಲೆ ಚಿತ್ರದ ಮೆಹಬೂಬಾ..... ಮೆಹಬೂಬಾ ಹಾಡಿನ ಅಬ್ಬರ ಆವರಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್ ಕ್ಲಬ್‌ನ ಡ್ಯಾನ್ಸ್‌ಪ್ಲೋರ್‌ನಲ್ಲಿ ಶೋಲೆ ಸಿನಿಮಾದ ‘ಮೆಹಬೂಬಾ...ಮೆಹಬೂಬಾ...’ ಹಾಡಿನ ಅಬ್ಬರ ಆವರಿಸಿತ್ತು. ಕಿವಿಗಡಚಿಕ್ಕುವ ಈ ಹಾಡಿಗೆ ತಕ್ಕಂತೆ ಡ್ಯಾನ್ಸರ್‌ವೊಬ್ಬಳು ನೃತ್ಯ ಮಾಡುತ್ತಿಳು. ಅಷ್ಟೊತ್ತಿಗೆ ಚಾವಣಿಯಲ್ಲಿ ದಿಢೀರ್ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಪರಿಕರಗಳೊಂದಿಗೆ ಸ್ಥಳದಿಂದ ದೌಡಾಯಿಸಲು ಮುಂದಾದರು
ಇದನ್ನು ನೋಡುತ್ತಿದ್ದಂತೆ ಗಾಬರಿಗೊಂಡ ಡ್ರಮ್ಸ್, ಗಿಟಾರ್ ನುಡಿಸುತ್ತಿದ್ದವರೆಲ್ಲ ಸಂಗೀತ ಸ್ಥಗಿತಗೊಳಿಸಿ, ತಮ್ಮ ಗಿಟಾರ್, ಡ್ರಮ್ಸ್, ಇತರೆ ಪರಿಕರಗಳೊಂದಿಗೆ ಸ್ಥಳದಿಂದ ದೌಡಾಯಿಸಲು ಮುಂದಾದರು. ಆ ವೇಳೆಗಾಗಲೇ ಜನ ಕೂಡ ‘ಆಗ್ ಲಗ್ ಗಯೀ...’(ಬೆಂಕಿ ಬಿದ್ದಿದೆ) ಎಂದು ಆತಂಕದಿಂದ ಚೀರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನದಿ ಹಿನ್ನೀರಲ್ಲಿ ನಿರ್ಮಾಣ, ಕಿರಿದಾದ ರಸ್ತೆಯಿಂದ ದುರಂತದ ತೀವ್ರತೆ ಹೆಚ್ಚಳ
ಪಣಜಿ: ಅರ್ಪೋರಾ ನದಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನ ಒಳ ಮತ್ತು ಹೊರಹೋಗುವ ದ್ವಾರಗಳು ಕಿರಿದಾಗಿದ್ದದ್ದೇ ಬೆಂಕಿ ದುರಂತದ ತೀವ್ರತೆ ಹೆಚ್ಚಲು ಕಾರಣ ಎಂದು ಹೇಳಲಾಗಿದೆ. ಕ್ಲಬ್ ಅನ್ನು ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದ್ದು, ಇದರ ತೆರವಿಗೆ ಸ್ಥಳೀಯ ಆಡಳಿತ ನೋಟಿಸ್ ಕೂಡ ನೀಡಿತ್ತು. ಈ ‘ಐಲ್ಯಾಂಡ್ ಕ್ಲಬ್’ ಅನ್ನು ಸಂಪರ್ಕಿಸುವ ರಸ್ತೆ ಕೂಡ ತೀವ್ರ ಕಿರಿದಾಗಿತ್ತು. ಮುಖ್ಯ ರಸ್ತೆಯಿಂದ ಕಿರಿದಾದ ಮಾರ್ಗ ಈ ಕ್ಲಬ್ ಅನ್ನು ಸಂಪರ್ಕಿಸುತ್ತಿದ್ದು, ದುರಂತದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಕೂಡ ತಮ್ಮ ಮುಖ್ಯ ಟ್ಯಾಂಕ್ ಅನ್ನು 400 ಮೀಟರ್ ಹಿಂದೆ ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಬೇಕಾಯಿತು ಎಂದು ಹೇಳಲಾಗಿದೆ.
