ಮೆಫಡ್ರೋನ್‌ ಡ್ರಗ್ಸ್‌ ದಂಧೆಯನ್ನು ಪುಣೆ ಪೊಲೀಸರು ಬೇಧಿಸಿದ್ದು, 3000 ಕೋಟಿ ರು. ಗೂ ಅಧಿಕ ಮೌಲ್ಯದ ಸುಮಾರು 1700 ಕೆಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ಪುಣೆ: ಮಿಯಾಂವ್‌ ಮಿಯಾಂವ್‌ ನಶೆ ಎಂದೇ ಕುಖ್ಯಾತವಾಗಿರುವ ನಿಷೇಧಿತ ಮೆಫಡ್ರೋನ್‌ ಡ್ರಗ್‌ ಜಾಲವನ್ನು ಪುಣೆ ಪೊಲೀಸರು ಬೇಧಿಸಿದ್ದು, ಬರೋಬ್ಬರಿ 3000 ಕೋಟಿ ರು. ಮೌಲ್ಯದ 1700 ಕೆ.ಜಿಗೂ ಅಧಿಕ ಮೊತ್ತದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ಭಾನುವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದುವರೆಗೂ 4 ಹಂತಗಳಲ್ಲಿ 1700 ಕೆಜಿಗೂ ಅಧಿಕ ತೂಕದ ಮೆಫಡ್ರೋನ್‌ ಡ್ರಗ್ಸ್‌ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಮೆಫಿಡ್ರೋನ್‌ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಯುವಕರು ಕೊರಿಯರ್‌ ಬಾಯ್ಸ್‌ ರೀತಿಯಲ್ಲಿ ಪೋಷಾಕು ಧರಿಸಿ ಓಡಾಡಿಕೊಂಡಿದ್ದರು.

ಅವರ ವಿರುದ್ಧ ಇದಕ್ಕೂ ಮೊದಲು ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.