ಹಳೆಯ ಚಾಕೋಲೆಟ್ ಸೇವಿಸಿದ ಮಗು ರಕ್ತವಾಂತಿ ಮಾಡಿ ಸಾವು

| Published : Apr 21 2024, 02:20 AM IST / Updated: Apr 21 2024, 09:09 AM IST

ಸಾರಾಂಶ

ಅವಧಿ ಮೀರಿದ ಚಾಕೋಲೆಟ್ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ

ಲುಧಿಯಾನ: ಅವಧಿ ಮೀರಿದ ಚಾಕೋಲೆಟ್ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ.

ಬಾಲಕಿ ತನ್ನ ಕುಟುಂಬದ ಜೊತೆಗೆ ಪಟಿಯಾಲದ ಸಂಬಂಧಿಕರ ಮನೆಗೆ ತೆರಳಿದ್ದಳು. ಅಲ್ಲಿಂದ ಹಿಂದಿರುಗುವ ಸಂದರ್ಭದಲ್ಲಿ ಸಂಬಂಧಿಕರು ಆಕೆಗೆ ಚಾಕೋಲೆಟ್ ಸೇರಿದಂತೆ ಇತರ ತಿನಿಸುಗಳನ್ನು ನೀಡಿದ್ದಾರೆ. ಅದನ್ನು ಸೇವಿಸುತ್ತಿದ್ದಂತೆ ಬಾಲಕಿ ರಕ್ತವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಅವಧಿ ಮೀರಿದ ಚಾಕೋಲೆಟ್ ಸೇವನೆಯೇ ಇದಕ್ಕೆ ಕಾರಣವೆಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.

ಘಟನೆ ಸಂಬಂಧ ಅಂಗಡಿ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಪಂಜಾಬ್ ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. 10 ವರ್ಷದ ಬಾಲಕಿ ತನ್ನ ಹುಟ್ಟುಹಬ್ಬದ ದಿನವೇ ಹಳಸಿದ ಕೇಕ್ ತಿಂದು ನಿಧನ ಹೊಂದಿದ್ದಳು.