ರಷ್ಯಾ ಅಧ್ಯಕ್ಷರಾಗಿ 5ನೇ ಬಾರಿಗೆ ಪುಟಿನ್‌ ಅಧಿಕಾರಕ್ಕೆ

| Published : May 08 2024, 01:10 AM IST

ರಷ್ಯಾ ಅಧ್ಯಕ್ಷರಾಗಿ 5ನೇ ಬಾರಿಗೆ ಪುಟಿನ್‌ ಅಧಿಕಾರಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಷ್ಯಾ ಅಧ್ಯಕ್ಷರಾಗಿ ದಾಖಲೆಯ ಐದನೇ ಬಾರಿಗೆ ವ್ಲಾಡಿಮಿರ್‌ ಪುಟಿನ್‌ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.

ಮಾಸ್ಕೊ: ರಷ್ಯಾ ಅಧ್ಯಕ್ಷರಾಗಿ ದಾಖಲೆಯ ಐದನೇ ಬಾರಿಗೆ ವ್ಲಾಡಿಮಿರ್‌ ಪುಟಿನ್‌ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.

ರಷ್ಯಾ ಅಧಿಕಾರದ ಶಕ್ತಿಕೇಂದ್ರ ಕ್ರೆಮ್ಲಿನ್‌ನಲ್ಲಿ ನಡೆದ ವೈಭವಯುತ ಸಮಾರಂಭದಲ್ಲಿ ಪುಟಿನ್‌ ಹಲವು ದಿಗ್ಗಜರ ಸಮ್ಮುಖದಲ್ಲಿ ರಾಷ್ಟ್ರದ ಸಂವಿಧಾನದ ಮೇಲೆ ತಮ್ಮ ಹಸ್ತವಿಟ್ಟು ಪ್ರಮಾಣ ಮಾಡಿದರು. ಇದರೊಂದಿಗೆ ಪುಟಿನ್‌ ಅವಧಿ 2030ರವರೆಗೆ ವಿಸ್ತರಣೆಗೊಂಡಿದ್ದು, ಜೋಸೆಫ್‌ ಸ್ಟಾಲಿನ್‌ ಬಳಿಕ ಅತ್ಯಂತ ದೀರ್ಘಾವಧಿಗೆ ದೇಶವನ್ನು ಮುನ್ನಡೆಸಿದ ನಾಯಕ ಎನಿಸಿಕೊಳ್ಳಲಿದ್ದಾರೆ.

1999ರಲ್ಲಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಪುಟಿನ್‌ ಕಾಲು ಶತಮಾನಗಳ ಕಾಲ ರಷ್ಯಾ ದೇಶವನ್ನು ಆರ್ಥಿಕ ಅಧಃಪತನದಿಂದ ಬಲಿಷ್ಠ ಸೇನಾ ರಾಷ್ಟ್ರವಾಗಿ ರೂಪಿಸಿದ್ದಾರೆ. ಅಲ್ಲದೆ ಉಕ್ರೇನ್‌ ಜೊತೆಗಿನ ಯುದ್ಧ ಮುನ್ನಡೆಸುವ ದೃಷ್ಟಿಯಿಂದ ಹೊಸ ಅಧಿಕಾರಾವಧಿಯಲ್ಲಿ ತೆರಿಗೆ ಹೆಚ್ಚಳ ಮಾಡಿ ಹೆಚ್ಚಿನ ಜನರನ್ನು ಬಲವಂತವಾಗಿ ಸೇನೆಗೆ ಸೇರಿಕೊಳ್ಳುವಂತೆ ನಿಯಮ ರೂಪಿಸುವ ಸಾಧ್ಯತೆ ಇದೆ.