ಸಾರಾಂಶ
ಮೇಘಾಲಯದ ಮಧುಚಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ವಿಶೇಷ ತನಿಖಾ ದಳ (ಎಸ್‌ಐಟಿ) ಮಂಗಳವಾರ ಕೊಲೆ ಸನ್ನಿವೇಶವನ್ನು ಮರುಸೃಷ್ಟಿಸಿದೆ. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತ ರಾಜಾ ರಘುವಂಶಿಯಾಗಿ ನಟಿಸಿದ್ದರು.
ಶಿಲ್ಲಾಂಗ್: ಮೇಘಾಲಯದ ಮಧುಚಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ವಿಶೇಷ ತನಿಖಾ ದಳ (ಎಸ್‌ಐಟಿ) ಮಂಗಳವಾರ ಕೊಲೆ ಸನ್ನಿವೇಶವನ್ನು ಮರುಸೃಷ್ಟಿಸಿದೆ. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತ ರಾಜಾ ರಘುವಂಶಿಯಾಗಿ ನಟಿಸಿದ್ದರು.
ಸೋನಂ ಮತ್ತು ರಾಜಾ ಬೈಕ್ ನಿಲ್ಲಿಸಿದ್ದ ಸೋಹ್ರಾದಿಂದ ತನಿಖೆ ಆರಂಭಿಸಿದ ಎಸ್‌ಐಟಿ, ಕೊಲೆ ಸನ್ನಿವೇಶವನ್ನು ಮರುಸೃಷ್ಟಿಸಿತು. ಈ ವೇಳೆ ರಾಜಾ ರಘುವಂಶಿಗೆ 3 ಬಲವಾದ ಪೆಟ್ಟು ಬಿದ್ದಿದೆ. ಬಳಿಕ 2 ಮಚ್ಚಿನಲ್ಲಿ ಕೊಚ್ಚಿಹಾಕಿ ಪ್ರಪಾತಕ್ಕೆ ದೂಡಿದರು ಎಂದು ತಿಳಿದುಬಂದಿತು. ಈ ವೇಳೆ ಸೋನಂ ತನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸಿದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.