ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಂ ಎಂಬಲ್ಲಿ ವಕ್ಫ್‌ ಮಂಡಳಿಯು ಸುಮಾರು 600 ಕುಟುಂಬಗಳ ಸುಮಾರು ನೂರಾರು ಎಕರೆ ಪ್ರದೇಶದ ಮೇಲೆ ಹಕ್ಕು ಸಾಧಿಸಿದ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಕಿರಣ್‌ ರಿಜಿಜು ಪ್ರತಿಕ್ರಿಯಿಸಿದ್ದು, ಈ ವಿಷಯದಲ್ಲಿ ನ್ಯಾಯ ಕೊಡುವ ಭರವಸೆ ನೀಡಿದ್ದಾರೆ.

ನವದೆಹಲಿ: ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಂ ಎಂಬಲ್ಲಿ ವಕ್ಫ್‌ ಮಂಡಳಿಯು ಸುಮಾರು 600 ಕುಟುಂಬಗಳ ಸುಮಾರು ನೂರಾರು ಎಕರೆ ಪ್ರದೇಶದ ಮೇಲೆ ಹಕ್ಕು ಸಾಧಿಸಿದ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಕಿರಣ್‌ ರಿಜಿಜು ಪ್ರತಿಕ್ರಿಯಿಸಿದ್ದು, ಈ ವಿಷಯದಲ್ಲಿ ನ್ಯಾಯ ಕೊಡುವ ಭರವಸೆ ನೀಡಿದ್ದಾರೆ.

ಸಮಸ್ಯೆ ಬಗ್ಗೆ ಬಿಜೆಪಿ ಮುಖಂಡ ರಾಜೀವ್‌ ಚಂದ್ರಶೇಖರ್‌ ಹಾಗೂ ಕೇರಳ ಬಿಜೆಪಿ ಮುಖಂಡ ಶೋನ್‌ ಜಾರ್ಜ್‌ ಅವರು ರಿಜಿಜು ಅವರನ್ನು ಸೋಮವಾರ ಭೇಟಿ ಮಾಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ರಿಜಿಜು, ‘ಕೇರಳದ ಮುನಂಬಂ ಭೂಮಿ ಪ್ರಕರಣದ ದೂರು ಸ್ವೀಕರಿಸಿದ್ದೇನೆ. ಮುನಂಬಂನಲ್ಲಿ 600 ಕುಟುಂಬಗಳಿಂದ ಭೂಮಿ ಮೇಲೆ ಹಕ್ಕು ಸಾಧಿಸಿದ ನಂತರ, ವಕ್ಫ್ ಮಂಡಳಿ ಈಗ ಕಣ್ಣೂರಿನ ತಳಿಪರಂಬ ನಗರದ ಮಧ್ಯಭಾಗದಲ್ಲಿರುವ 600 ಎಕರೆ ಮೇಲೆ ಮಾಲೀಕತ್ವ ಸಾಧಿಸುತ್ತಿದೆ. ಈ ಬಗ್ಗೆ ಸಂಪೂರ್ಣ ನ್ಯಾಯ ಸಿಗುವ ಭರವಸೆ ನೀಡಿದ್ದೇನೆ’ ಎಂದಿದ್ದಾರೆ.

ಇದಕ್ಕೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಜೀವ್‌, ‘ಮೋದಿ ಸರ್ಕಾರ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಲಿದೆ. ಆದರೆ ಸಂವಿಧಾನ, ನಾಗರಿಕರ ಹಕ್ಕುಗಳ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಹಾಗೂ ಸಿಪಿಎಂಗಳು ಮುಸ್ಲಿಮರ ವಿಷಯ ಬಂದಾಗ ಎಲ್ಲ ಮರೆಯುತ್ತವೆ’ ಎಂದಿದ್ದಾರೆ.