ಉದಯಗಿರಿ, ಹಿಮಗಿರಿ ಸ್ಟೆಲ್ತ್‌ ನೌಕೆ ನೌಕಾಪಡೆ ಬತ್ತಳಿಕೆಗೆ

| N/A | Published : Aug 27 2025, 01:00 AM IST

ಉದಯಗಿರಿ, ಹಿಮಗಿರಿ ಸ್ಟೆಲ್ತ್‌ ನೌಕೆ ನೌಕಾಪಡೆ ಬತ್ತಳಿಕೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ನೌಕಾಪಡೆಯ ದಾಳಿ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿರುವ ಅತ್ಯಾಧುನಿಕ ಸ್ಟೆಲ್ತ್‌ ಸಾಮರ್ಥ್ಯ ಹೊಂದಿರುವ ಐಎನ್‌ಎಸ್‌ ಹಿಮಗಿರಿ ಮತ್ತು ಐಎನ್‌ಎಸ್‌ ಉದಯಗಿರಿ ಎಂಬ 2 ಯುದ್ಧನೌಕೆಗಳನ್ನು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.

 ನವದೆಹಲಿ: ಭಾರತದ ನೌಕಾಪಡೆಯ ದಾಳಿ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿರುವ ಅತ್ಯಾಧುನಿಕ ಸ್ಟೆಲ್ತ್‌ ಸಾಮರ್ಥ್ಯ ಹೊಂದಿರುವ ಐಎನ್‌ಎಸ್‌ ಹಿಮಗಿರಿ ಮತ್ತು ಐಎನ್‌ಎಸ್‌ ಉದಯಗಿರಿ ಎಂಬ 2 ಯುದ್ಧನೌಕೆಗಳನ್ನು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.

ರಕ್ಷಣಾ ಸಚಿವ ರಾಜ್‌ನಾಥ್‌ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ನಿರ್ಮಾಣವಾದ ಮುಂಚೂಣಿ ದಾಳಿ ಸಾಮರ್ಥ್ಯ ಹೊಂದಿರುವ ಯುದ್ಧ ನೌಕೆಗಳನ್ನು ಏಕಕಾಲಕ್ಕೆ ದೇಶಕ್ಕೆ ಸಮರ್ಪಿಸಲಾಗಿದೆ.

ಪ್ರಾಜೆಕ್ಟ್ 17A: ಇವು ಹೊಸ ಪೀಳಿಗೆಯ ಸ್ಟೆಲ್ತ್ (ಶತ್ರುಗಳ ಕಣ್ತಪ್ಪಿಸುವ) ದಾಳಿ ನೌಕೆಗಳಾಗಿದ್ದು ಐಎನ್‌ಎಸ್‌ ಉದಯಗಿರಿಯನ್ನು ಮುಂಬೈನ ಮಡಗಾಂವ್‌ ಶಿಪ್‌ಯಾರ್ಡ್‌ನಲ್ಲಿ ಮತ್ತು ಐಎನ್‌ಎಸ್ ಹಿಮಗಿರಿಯನ್ನು ಕೋಲ್ಕತಾದಲ್ಲಿ ನಿರ್ಮಿಸಲಾಗಿದೆ.

ದೇಶಿ ತಂತ್ರಜ್ಞಾನ:

ಎರಡೂ ನೌಕೆಗಳನ್ನು ಶೇ.75ರಷ್ಟು ಸ್ವದೇಶಿ ವಸ್ತುಗಳಿಂದಲೇ ನಿರ್ಮಿಸಲಾಗಿದೆ. ಜೊತೆಗೆ, ಸಾಮಾನ್ಯವಾಗಿ ಇಂಥ ಯುದ್ಧ ನೌಕೆಗಳನ್ನು ಆರಂಭದಿಂದ ಕೊನೆಯವರೆಗೂ ಒಂದೇ ಸ್ಥಳದಲ್ಲಿ ಸಂಪೂರ್ಣವಾಗಿ ನಿರ್ಮಿಸಲಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕು. ಆದರೆ ಈ ಹೊಸ ಯುದ್ಧನೌಕೆಗಳ ಎಲ್ಲಾ ಬಿಡಿಭಾಗಗಳನ್ನು ಬೇರೆ ಬೇರೆ ಕಡೆ ತಯಾರಿಸಿ ಅವುಗಳನ್ನು ಶಿಪ್‌ಯಾರ್ಡ್‌ಗೆ ತಂದು ಜೋಡಿಸಲಾಗಿದೆ. ಹೀಗಾಗಿ ಅತ್ಯಂತ ತ್ವರಿತವಾಗಿ ನೌಕೆ ನಿರ್ಮಾಣ ಸಾಧ್ಯವಾಗಿದೆ.

ಸಾಮರ್ಥ್ಯ:

ಎರಡೂ ಯುದ್ಧನೌಕೆಗಳು 6,670 ಟನ್‌ಗಳನ್ನು ತೂಕವಿದ್ದು, ಅತ್ಯಾಧುನಿಕ ಸ್ಟೆಲ್ತ್‌ ಗುಣಲಕ್ಷಣ ಹೊಂದಿವೆ. ನೌಕೆಗಳು ತಲಾ 149 ಮೀಟರ್‌ ಉದ್ದವಿದೆ. ಡೀಸೆಲ್‌ ಮತ್ತು ಗ್ಯಾಸ್‌ನಲ್ಲಿ ಚಲಿಸುವ ಇವುಗಳು ಡೀಸೆಲ್‌ನಲ್ಲಿ ಕ್ರೂಸಿಂಗ್‌ ಮತ್ತು ಗ್ಯಾಸ್‌ನಲ್ಲಿವ ವೇಗಕ್ಕೆ ಬಳಕೆ ಮಾಡುತ್ತವೆ. ಗಂಟೆಗೆ 51 ಕಿ.ಮೀ ವೇಗದಲ್ಲಿ ಚಲಿಸಬಲ್ಲವು.

ಈ ನೌಕೆಗಳು ತಲಾ 8 ಬ್ರಹ್ಮೋಸ್‌ ಕ್ಷಿಪಣಿ ಒಳಗೊಂಡಿದ್ದು, ಹೆಚ್ಚುವರಿಯಾಗಿ ಇನ್ನೂ 12 ಬ್ರಹ್ಮೋಸ್‌ ಹೊಂದುವ ಅವಕಾಶವಿದೆ. ಜೊತೆಗೆ 48 ಬರಾಕ್‌-8 ದೀರ್ಘ ಶ್ರೇಣಿಯ ಕ್ಷಿಪಣಿ, ಎಂಎಚ್‌-60 ರೋಮಿಯೋ, ಎಎಲ್‌ಎಚ್‌ ಧ್ರುವ್‌ ಎಂಕೆ-111 ಸೇರಿ ಹಲವು ಕಾಪ್ಟರ್‌ಗಳನ್ನು ಇವುಗಳು ಹೊರುವ ಸಾಮರ್ಥ್ಯ ಹೊಂದಿವೆ.

ಹಳೆ ಹೆಸರು ಹೊಸ ಚಿಗುರು:

ಐಎನ್‌ಎಸ್‌ ಹಿಮಗಿರಿ ಹೆಸರಿನ ನೌಕೆ ಈ ಹಿಂದೆ 1974-2005ರವರೆಗೆ ಐಎನ್‌ಎಸ್‌ ಉದಯಗಿರಿಯು 1976-2007ರವರೆಗೆ ನೌಕೆಯಲ್ಲಿ ಸೇವೆ ಸಲ್ಲಿಸಿವೆ. ಅದೇ ಹೆಸರನ್ನು ಇದಕ್ಕೂ ಇಡಲಾಗಿದೆ.

Read more Articles on