ಪಾಕ್‌ ಪೊಲೀಸ್‌ ಜೊತೆಮದುವೆ, ಸ್ವಿಜೆರ್ಲೆಂಡ್‌ಲ್ಲಿಹನಿಮೂನ್‌: ನಟಿ ರಾಖಿ

| Published : Jan 29 2025, 01:30 AM IST

ಪಾಕ್‌ ಪೊಲೀಸ್‌ ಜೊತೆಮದುವೆ, ಸ್ವಿಜೆರ್ಲೆಂಡ್‌ಲ್ಲಿಹನಿಮೂನ್‌: ನಟಿ ರಾಖಿ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ರಾಖಿ ಸಾವಂತ್‌ 3ನೇ ಬಾರಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಪಾಕಿಸ್ತಾನ ಮೂಲದ ವ್ಯಕ್ತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಉತ್ಸುಕರಾಗಿದ್ದಾರೆ.

ಮುಂಬೈ: ನಟಿ ರಾಖಿ ಸಾವಂತ್‌ 3ನೇ ಬಾರಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಪಾಕಿಸ್ತಾನ ಮೂಲದ ವ್ಯಕ್ತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಉತ್ಸುಕರಾಗಿದ್ದಾರೆ. ಸಂದರ್ಶವೊಂದರಲ್ಲಿ ತಮ್ಮ ಮದುವೆ ಪ್ರಸ್ತಾವ ಮುಂದಿರಿಸಿದ ರಾಖಿ,‘ಪಾಕಿಸ್ತಾನದಿಂದ ಬಹಳಷ್ಟು ಮದುವೆ ಪ್ರಸ್ತಾವಗಳು ಬಂದಿತ್ತು. ದೋಡಿ ಖಾನ್‌ ಪಾಕಿಸ್ತಾನದ ಪೊಲೀಸ್‌ ಅಧಿಕಾರಿಯಾಗಿದ್ದು, ನಟರೂ ಆಗಿದ್ದಾರೆ. ಅವರೊಂದಿಗೆ ಇಸ್ಲಾಮಿಕ್‌ ಸಂಪ್ರದಾಯದಲ್ಲಿ ಮದುವೆಯಾಗಿ, ಭಾರತದಲ್ಲಿ ರಿಸೆಪ್ಷನ್‌ ಮಾಡಿಕೊಳ್ಳುತ್ತೇನೆ. ಸ್ವಿಜರ್ಲೆಂಡ್‌ಗೆ ಹನಿಮೂನ್‌ಗೆ ಹೋಗಿ, ದುಬೈನಲ್ಲಿ ನೆಲೆಸುತ್ತೇವೆ ಎಂದಿದ್ದಾರೆ. ರಾಖಿ ಈ ಹಿಂದೆ ಆದಿಲ್‌ ಖಾನ್ ದುರಾನಿ ಮತ್ತು ರಿತೇಶ್‌ ರಾಜ್‌ ಸಿಂಗ್‌ರನ್ನು ವಿವಾಹವಾಗಿ ವಿಚ್ಛೇದನ ಪಡೆದುಕೊಂಡಿದ್ದರು.