ಇನ್ನು ನಿತ್ಯ ಮಧ್ಯಾಹ್ನ 1 ಗಂಟೆ ರಾಮ ಮಂದಿರ ಬಂದ್‌

| Published : Feb 17 2024, 01:16 AM IST / Updated: Feb 17 2024, 11:54 AM IST

Over 1,000 km From Ayodhya, Another Ram Temple Inaugurated

ಸಾರಾಂಶ

ಇನ್ನು ನಿತ್ಯ ಮಧ್ಯಾಹ್ನ 1 ಗಂಟೆ ರಾಮ ಮಂದಿರ ಬಂದ್‌ ಆಗಲಿದ್ದು, ಮಧ್ಯಾಹ್ನ 12.30 ರಿಂದ 1.30ರವೆರೆ ರಾಮಲಲ್ಲಾ ದರ್ಶನವಿಲ್ಲ ಎಂದು ಟ್ರಸ್ಟ್‌ ತಿಳಿಸಿದೆ. ‘ರಾಮ ಮಗು, ಅವನಿಗೆ ವಿಶ್ರಾಂತಿ ಬೇಕು, ಒತ್ತಡ ಹೇರಬಾರದು’ ಎಮದು ಅರ್ಚಕರು ತಿಳಿಸಿದ್ದಾರೆ

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ನೂತನ ರಾಮ ಮಂದಿರವನ್ನು ಇನ್ನು ಮುಂದೆ ಪ್ರತಿದಿನ ಮಧ್ಯಾಹ್ನದ ವೇಳೆ 1 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎಂದು ಮಂದಿರದ ಮುಖ್ಯ ಅರ್ಚಕರು ತಿಳಿಸಿದ್ದಾರೆ.

ಶುಕ್ರವಾರ ಮಾತನಾಡಿದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ‘ರಾಮಲಲ್ಲಾ 5 ವರ್ಷದ ಮಗು. ಅವನು ದೀರ್ಘ ಕಾಲ ಎಚ್ಚರವಾಗಿರಲು ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. 

ಹಾಗಾಗಿ ಬಾಲಕ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮಧ್ಯಾಹ್ನ 12:30 ರಿಂದ 1:30 ರವರೆಗೆ ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಆದ್ದರಿಂದ ದೇವರು ವಿಶ್ರಾಂತಿ ಪಡೆಯುತ್ತಾನೆ’ ಎಂದಿದ್ದಾರೆ.

ಮಂದಿರಕ್ಕೆ ನಿತ್ಯ ಸಾವಿರಾರು ಭಕ್ತರ ದಂಡು ಹರಿದುಬರುತ್ತಿರುವ ಕಾರಣ, ಈವರೆಗೆ ಮಧ್ಯಾಹ್ನದ ವಿರಾಮವೂ ಇಲ್ಲದೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಮಂದಿರವನ್ನು 6 ಗಂಟೆಗೆ ತೆರೆದರೂ ಅದರ ಮುನ್ನ, ಮುಂಜಾನೆ 4 ರಿಂದ 6ರವರೆಗೆ 2 ಗಂಟೆಗಳ ಕಾಲ ವಿಧಿ ವಿಧಾನಗಳನ್ನು ಆಚರಿಸಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.