ಸೌದಿ ಅರೇಬಿಯಾದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿ ನಿವೃತ್ತಿ ಬಳಿಕ ಚೆನ್ನೈಗೆ ಮರಳಿದ್ದ ನಿವೃತ್ತ ಎಂಜಿನಿಯರ್ ಬಂಪರ್ ಲಾಟರಿ ಗೆದ್ದಿದ್ದಾರೆ.

ಚೆನ್ನೈ: ಸೌದಿ ಅರೇಬಿಯಾದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿ ನಿವೃತ್ತಿ ಬಳಿಕ ಚೆನ್ನೈಗೆ ಮರಳಿದ್ದ ನಿವೃತ್ತ ಎಂಜಿನಿಯರ್ ಬಂಪರ್ ಲಾಟರಿ ಗೆದ್ದಿದ್ದಾರೆ. ಶ್ರೀರಾಮ್ ರಾಜಗೋಪಾಲ್‌ ಎನ್ನುವವರು ಸೌದಿಯ ಆನ್‌ಲೈನ್‌ ಗೇಮ್‌ವೊಂದರಲ್ಲಿ ಬರೋಬ್ಬರಿ 230 ಕೋಟಿ ರು. ಗೆದ್ದಿದ್ದಾರೆ. 

ಎಮಿರೇಟ್ಸ್‌ ಡ್ರಾ ಎಂಇಜಿಎ7 ಎಂಬ ಆನ್‌ಲೈನ್‌ ಗೇಮ್‌ನಲ್ಲಿ ಆಸಕ್ತಿ ಹೊಂದಿದ್ದ ಶ್ರೀರಾಮ್ ಕಳೆದ ಮೇ 16 ರಂದು ಟಿಕೆಟ್‌ವೊಂದನ್ನು ಖರೀದಿಸಿದ್ದರು. ಖರೀದಿ ವೇಳೆ ಕಣ್ಣು ಮುಚ್ಚಿಕೊಂಡು ಮನಸ್ಸಿಗೆ ಬಂದ 7 ಅಂಕೆ ಆಯ್ಕೆ ಮಾಡಿಕೊಂಡಿದ್ದರು. 

ಅಚ್ಚರಿ ಎಂಬಂತೆ ಅದೇ 7 ಸಂಖ್ಯೆಗಳಿಗೆ ಇದೀಗ 230 ಕೋಟಿ ರು. ಬಹುಮಾನ ಬಂದಿದೆ. ಇದಯ ಡ್ರಾ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತವಾಗಿದ್ದು, ಭಾರತೀಯರೊಬ್ಬರು ಗೆದ್ದ ಅತಿದೊಡ್ಡ ಬಹುಮಾನಗಳಲ್ಲೊಂದು.