ಸಾರಾಂಶ
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ 48 ಕ್ಷೇತ್ರಗಳ ಪೈಕಿ ಮಹಾಯುತಿ ಕೇವಲ 17 ಸ್ಥಾನ ಪಡೆದು ಕಳಪೆ ಪ್ರದರ್ಶನ ತೋರಿತ್ತು. ಆದರೆ ಇದಾದ ಆರೇ ತಿಂಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಸೋಲನ್ನು ಮಹಾಯುತಿ ಹಿಮ್ಮೆಟ್ಟಿಸಿದೆ.
ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ 48 ಕ್ಷೇತ್ರಗಳ ಪೈಕಿ ಮಹಾಯುತಿ ಕೇವಲ 17 ಸ್ಥಾನ ಪಡೆದು ಕಳಪೆ ಪ್ರದರ್ಶನ ತೋರಿತ್ತು. ಆದರೆ ಇದಾದ ಆರೇ ತಿಂಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಸೋಲನ್ನು ಮಹಾಯುತಿ ಹಿಮ್ಮೆಟ್ಟಿಸಿದೆ.
ಇದಕ್ಕೆ ಆರೆಸ್ಸೆಸ್ ಕೊಡುಗೆ ಪ್ರಧಾನವಾಗಿದೆ. ನಗರಗಳಲ್ಲಿ ಹೆಚ್ಚಾಗಿ ಬಿಜೆಪಿ ಪರ ಒಲವಿದ್ದರೂ ಮತದಾರರು ಮತಗಟ್ಟೆಗೆ ಹೋಗುವುದು ಅಪರೂಪ. ಹೀಗಾಗಿ ನಗರಗಳಲ್ಲಿ ಮತದಾನ ಕಡಿಮೆ ಆಗುತ್ತಿದೆ ಎಂಬುದನ್ನು ಮನಗಂಡ ಆರೆಸ್ಸೆಸ್ ಅನೇಕ ನ ನಗರಗಳಲ್ಲಿ ಮನೆ-ಮನೆಗೆ ತೆರಳಿ ಮತದಾರರ ಪ್ರೇರೇಪಿಸುವ ಕೆಲಸ ಮಾಡಿತು. ಇದು ಫಲ ನೀಡಿದ್ದು ಬಿಜೆಪಿಗೆ ಉತ್ತಮ ಸ್ಥಾನ ಬರಲು ನಾಂದಿ ಹಾಡಿದೆ.ಇದೇ ವೇಳೆ ಲಡ್ಕಿ ಬಹಿನ್‌ನಂಥ ಉಚಿತ ಯೋಜನೆ, ಮರಾಠಾ ಕೋಟಾ ವಿವಾದದ ಸೂಕ್ಷ್ಮ ನಿರ್ವಹಣೆ. ಬಹುಸಂಖ್ಯಾತರು ಒಗ್ಗಟ್ಟಿನಿಂದ ಇರಬೇಕು ಎಂಬ ಆಂದೋಲನಗಳು ಲೋಕಸಭೆ ಚುನಾವಣೆಯಲ್ಲಿನ ಮಹಾಯುತಿ ಹಿನ್ನಡೆಯನ್ನು ಹಿಮ್ಮೆಟ್ಟಿಸಿವೆ.