ಎಸ್‌ಪಿ ಶಾಸಕರಿಂದಲೂ ಬಿಜೆಪಿಯತ್ತ ವಲಸೆ?

| Published : Feb 18 2024, 01:38 AM IST / Updated: Feb 18 2024, 08:06 AM IST

ಸಾರಾಂಶ

ಸಮಾಜವಾದಿ ಪಕ್ಷದ 10 ಶಾಸಕರು ಬಿಜೆಪಿಗೆ, ಮೂವರು ಕಾಂಗ್ರೆಸ್‌ಗೆ ವಲಸೆ ಹೋಗಲಿದ್ದಾರೆ ಎನ್ನಲಾಗಿದೆ.

ಲಖನೌ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲಿ ಆರಂಭವಾಗಿರುವ ವಿಪಕ್ಷ ನಾಯಕರ ಬಿಜೆಪಿ ಕಡೆಗಿನ ವಲಸೆ ಉತ್ತರಪ್ರದೇಶದಲ್ಲೂ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ರಾಜ್ಯ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ 108 ಶಾಸಕರಿದ್ದು ಈ ಪೈಕಿ ಕನಿಷ್ಠ 10 ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

ಜೊತೆಗೆ 3 ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇವರೆಲ್ಲಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.