ಮಾನಹಾನಿ ಕೇಸಲ್ಲಿ ಮೇಧಾ ಪಾಟ್ಕರ್‌ ದೋಷಿ: ಸುಪ್ರೀಂ

| N/A | Published : Aug 12 2025, 12:30 AM IST / Updated: Aug 12 2025, 05:16 AM IST

Medha Patkar,
ಮಾನಹಾನಿ ಕೇಸಲ್ಲಿ ಮೇಧಾ ಪಾಟ್ಕರ್‌ ದೋಷಿ: ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರವಾದಿ ಮೇಧಾ ಪಾಟ್ಕರ್‌ ಅವರು 25 ವರ್ಷ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ತಪ್ಪಿತಸ್ಥೆ ಎಂದು ದೆಹಲಿ ಹೈಕೋರ್ಟ್‌ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ನವದೆಹಲಿ: ಪರಿಸರವಾದಿ ಮೇಧಾ ಪಾಟ್ಕರ್‌ ಅವರು 25 ವರ್ಷ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ತಪ್ಪಿತಸ್ಥೆ ಎಂದು ದೆಹಲಿ ಹೈಕೋರ್ಟ್‌ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ಈಗ ದಿಲ್ಲಿ ಉಪರಾಜ್ಯಪಾಲ ಆಗಿರುವ ವಿ.ಕೆ. ಸಕ್ಸೇನಾ ಅವರು 2001ರಲ್ಲಿ ಗುಜರಾತ್‌ನಲ್ಲಿ ಎನ್‌ಜಿಒ ಒಂದನ್ನು ಮುನ್ನಡೆಸುತ್ತಿದ್ದರು. ಆಗ ಮೇಧಾ. ‘ಸಕ್ಸೇನಾ ಗುಜರಾತ್ ಜನರನ್ನು ಮತ್ತು ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡವಿಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದರ ವಿರುದ್ಧ ಸಕ್ಸೇನಾ ಮಾನಹಾನಿ ಪ್ರಕರಣ ದಾಖಲಿಸಿದ್ದು, ಮೇಧಾರನ್ನು ದೋಷಿ ಎಂದು ಬಂಧಿಸಲಾಗಿತ್ತು. ಆದರೆ ಸನ್ನಡತೆ ಆಧಾರದಲ್ಲಿ ಏ.8ರಂದು ಬಿಡುಗಡೆಗೊಳಿಸಲಾಗಿತ್ತು.

ತಮ್ಮನ್ನು ಅಪರಾಧಿ ಎಂದಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮೇಧಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್ ಆದೇಶ ಅನುಮೋದಿಸಿದೆ. ಜತೆಗೆ 3 ವರ್ಷಕ್ಕೊಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿದೆ. ಆದದರೆ 1 ಲಕ್ಷ ರು. ದಂಡವನ್ನು ರದ್ದುಗೊಳಿಸಿದೆ.

 ಒಡಿಶಾ: ಬೆಂಕಿ ಹಚ್ಚಿಕೊಂಡು 13ರ ಬಾಲಕಿ ಆತ್ಮ*ತ್ಯೆ

 ಭುವನೇಶ್ವರ :  ಒಡಿಶಾದಲ್ಲಿ ಹೆಣ್ಣುಮಕ್ಕಳ ದುರಂತ ಸಾವಿನ ಸರಣಿ ಮುಂದುವರೆದಿದ್ದು, ಬೆಂಕಿ ಹಚ್ಚಿಕೊಂಡ 13 ವರ್ಷದ ಬಾಲಕಿಯೊಬ್ಬಳು ಆತ್ಮ#ತ್ಯೆ ಮಾಡಿಕೊಂಡಿದ್ದಾಳೆ. ಇದು ಕಳೆದ ಒಂದು ತಿಂಗಳಿನಲ್ಲಿ ರಾಜ್ಯದಲ್ಲಿ ನಡೆದ ನಾಲ್ಕನೇಯ ಘೋರ ಘಟನೆಯಾಗಿದೆ.ಇಲ್ಲಿ ಬರ್ಗಢ ಜಿಲ್ಲೆಯ ಫಿರಿಂಗ್ಮಲ್ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ 13 ವರ್ಷದ ಬಾಲಕಿ ಭಾನುವಾರ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದನ್ನು ಗಮನಿಸಿದ ಗ್ರಾಮಸ್ಥರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸೋಮವಾರ ಆಕೆಯ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಆದರೆ ಅಪ್ರಾಪ್ತ ಬಾಲಕಿ ಆತ್ಮ#ತ್ಯೆ ಮಾಡಿಕೊಳ್ಳಲು ಕಾರಣವೇನು ಎನ್ನುವುದು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಿಂಗಳಲ್ಲೇ 4ನೇ ಘಟನೆ:

ಈ ಬಾಲಕಿಯ ರೀತಿಯಲ್ಲಿಯೇ ರಾಜ್ಯದಲ್ಲಿ ಕಳೆದೊಂದು ತಿಂಗಳಿನಲ್ಲಿ 3 ಹೆಣ್ಣು ಮಕ್ಕಳು ಬೆಂಕಿ ದುರಂತಕ್ಕೆ ಬಲಿಯಾಗಿ ದ್ದಾರೆ. ಜು.12ರಂದು ಬಾಲ್‌ಸೋರ್‌ನಲ್ಲಿ 20 ವರ್ಷದ ವಿದ್ಯಾರ್ಥಿನಿ ತನ್ನ ಪ್ರಾಧ್ಯಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಕಾಲೇಜಿನ ಆವರಣದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮ#ತ್ಯೆ ಮಾಡಿಕೊಂಡಿದ್ದಳು. ಇನ್ನೊಂದು ಕೇಸ್‌ನಲ್ಲಿ ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯೊಬ್ಬಳನ್ನು ಸುಟ್ಟು ಹಾಕಿದ್ದರು. ಮತ್ತೊಂದು ಪ್ರಕರಣದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳ ಶವ ಆಕೆಯ ನಿವಾಸದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

 ಸೆನ್ಸೆಕ್ಸ್‌ 746 ಅಂಕ ನೆಗೆತ: 80 ಸಾವಿರ ಗಡಿದಾಟಿ ಅಂತ್ಯ

ಮುಂಬೈ: ಅಮೆರಿಕ ಸುಂಕ ನೀತಿಯ ಪರಿಣಾಮದಿಂದ ಕಳೆದ ವಾರ ಇಳಿಕೆಯ ಹಾದಿಯಲ್ಲಿ ಸಾಗಿದ್ದ ಬಾಂಬೆ ಷೇರುಪೇಟೆ ಸೋಮವಾರ ಚೇತರಿಸಿದೆ. ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 746 ಅಂಕ ಏರಿಕೆಯಾಗಿದ್ದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 221 ಅಂಕ ಜಿಗಿತ ಕಂಡಿದೆ.ಸೆನ್ಸೆಕ್ಸ್‌ ಸೋಮವಾರ ದಿನದಂತ್ಯಕ್ಕೆ 746.29 ಅಂಕಗಳ ಏರಿಕೆಯೊಂದಿಗೆ 80,604.08ರಲ್ಲಿ ಮುಕ್ತಾಯಗೊಂಡರೆ ನಿಫ್ಟಿ 221.75 ಅಂಕ ಹೆಚ್ಚಳದೊಂದಿಗೆ 24,585.05ರಲ್ಲಿ ಅಂತ್ಯಗೊಂಡಿತು.

ಕಡಿಮೆಯಾಗುತ್ತಿರುವ ಭೌಗೋಳಿಕ ರಾಜಕೀಯದ ಉದ್ವಿಗ್ನತೆ, ಈ ವಾರ ನಡೆಯಲಿರುವ ರಷ್ಯಾ- ಅಮೆರಿಕ ಮಾತುಕತೆ ಷೇರು ಮಾರುಕಟ್ಟೆಯ ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

‘ವಿಭಜನಾ ಭಯಾನಕ ದಿನ’ ಆಚರಿಸಿ : ಕೇರಳ ಗೌರ್ನರ್‌ ಸುತ್ತೋಲೆ ವಿವಾದ

 ತಿರುವನಂತಪುರಂ ಭಾರತ-ಪಾಕ್‌ ಇಬ್ಭಾಗವಾದ ದಿನವಾದ ಆ.14 ಅನ್ನು ‘ವಿಭಜನಾ ಭಯಾನಕ ದಿನ’ ಎಂದು ಆಚರಿಸಲು ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ರಾಜ್ಯದ ಎಲ್ಲಾ ವಿವಿಗಳಿಗೂ ಸುತ್ತೋಲೆ ಹೊರಡಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಆಡಳಿತ, ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸುತ್ತೋಲೆ ವಿವಾದದ ಬಗ್ಗೆ ರಾಜಭವನ ಸ್ಪಷ್ಟನೆ ನೀಡಿದ್ದು, ‘ಜೂನ್‌ನಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಹೊರಡಿಸಲಾಗಿದೆ’ ಎಂದಿದೆ. ರಾಜ್ಯಪಾಲರ ನಡೆಗೆ ಆಕ್ಷೇಪಿಸಿರುವ ಶಿಕ್ಷಣ ಸಚಿವ ಶಿವನ್‌ಕುಟ್ಟಿ, ‘ಸಂಪುಟದ ಅನುಮೋದನೆಯಿಲ್ಲದೆ ಸುತ್ತೋಲೆ ಹೊರಡಿಸಿದ್ದು ಸರಿಯಲ್ಲ’ ಎಂದಿದ್ದಾರೆ. ವಿಪಕ್ಷ ನಾಯಕ ವಿ.ಡಿ. ಸತೀಶನ್ ಮಾತನಾಡಿ ‘ಇದು ಸವಿಧಾನ ಬಾಹಿರವಾಗಿದೆ. ಸಾಂವಿಧಾನಿಕ ಹುದ್ದೆ ಹೊಂದಿದ್ದರೂ ಆರ್‌ಎಸ್‌ಎಸ್‌ ವಿಭಜಕ ನೀತಿಯನ್ನು ಅನುಸರಿಸುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

Read more Articles on