ಸಾರಾಂಶ
ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆ ನೀಡುವ ಪದ್ಧತಿಯ ವಿರುದ್ಧದ ಸಲ್ಲಿಸಲಾಗಿರುವ ಹೊಸ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.
ನವದೆಹಲಿ : ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆ ನೀಡುವ ಪದ್ಧತಿಯ ವಿರುದ್ಧದ ಸಲ್ಲಿಸಲಾಗಿರುವ ಹೊಸ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.
ಬೆಂಗಳೂರು ನಿವಾಸಿ ಶಶಾಂಕ್ ಜೆ. ಶ್ರೀಧರ ಅರ್ಜಿ ಸಲ್ಲಿಸಿದ್ದು, ‘ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆಗಳನ್ನು ನೀಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೋರ್ಟ್ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.
‘ಉಚಿತ ಕೊಡುಗೆಗಳ ಅನಿಯಂತ್ರಿತ ಭರವಸೆಗಳು ಸರ್ಕಾರಿ ಖಜಾನೆಯ ಮೇಲೆ ಗಮನಾರ್ಹ ಮತ್ತು ಲೆಕ್ಕವಿಲ್ಲದ ಆರ್ಥಿಕ ಹೊರೆ ಹೇರುತ್ತದೆ. ಇದಲ್ಲದೆ, ಪಕ್ಷಗಳ ಚುನಾವಣಾ ಪೂರ್ವ ಭರವಸೆಗಳ ಈಡೇರಿಕೆ ಖಚಿತಪಡಿಸಿಕೊಳ್ಳಲು ಯಾವುದೇ ಕಾರ್ಯವಿಧಾನವಿಲ್ಲ’ ಎಂದು ಮನವಿಯಲ್ಲಿ ಹೇಳಲಾಗಿದೆ. ಕೋರ್ಟು ಇದೇ ವಿಷಯದ ಇತರ ಮನವಿಗಳೊಂದಿಗೆ ಈ ಅರ್ಜಿಯನ್ನು ಟ್ಯಾಗ್ ಮಾಡಿದೆ.