ಸಾರಾಂಶ
ಬಾಲಕರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ರಾಮನವಮಿಯಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ.
ಅಯೋಧ್ಯೆ : ಬಾಲಕರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ರಾಮನವಮಿಯಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಅರುಣ್ ಕುಟುಂಬ ಇಂದಿಗೂ ರಾಮ ಮಂದಿರ ದರ್ಶನವನ್ನು ಪಡೆದಿಲ್ಲ. ಅವರ ಕುಟುಂಬ ರಾಮನನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿತ್ತು. ಕುಟುಂಬವನ್ನು ಕರೆದುಕೊಂಡು ಹೋಗುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಶಿಲ್ಪಿ ಅರುಣ್ ಯೋಗಿರಾಜ್ ತಮ್ಮ ಕುಟುಂಬದ ಜೊತೆಗೆ ರಾಮನವಮಿ ಆಚರಣೆಗೆ ತೆರಳುವ ಸಾಧ್ಯತೆಯಿದೆ.