ಸಾರಾಂಶ
ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್ ಸಿಗದ ಕಾರಣ ನಡೆಯುತ್ತಿರುವಾಗ 80ರ ವೃದ್ಧರೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ.
ಮುಂಬೈ: ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಟರ್ಮಿನಲ್‌ಗೆ ಬರಲು ವ್ಹೀಲ್‌ಚೇರ್ ಸಿಗದ ಕಾರಣ 80ರ ವೃದ್ಧರೊಬ್ಬರು ನಡೆದು ಬರುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ನ್ಯೂಯಾರ್ಕ್‌ನಿಂದ ಏರ್‌ಇಂಡಿಯಾ ವಿಮಾನದ ಮೂಲಕ ತನ್ನ ಪತ್ನಿಯೊಂದಿಗೆ ಬಂದಿದ್ದ 80ರ ವೃದ್ಧ, ಸಿಬ್ಬಂದಿಯ ಬಳಿ ಗಾಲಿಕುರ್ಚಿಗೆ ಕೋರಿದ್ದನು.
ವಿಮಾನ ಸಿಬ್ಬಂದಿಯು ಆತನ ಪತ್ನಿಗೆ ಗಾಲಿಕುರ್ಚಿ ಕೊಟ್ಟು ಆತನಿಗೆ, ಗಾಲಿಕುರ್ಚಿ ಸದ್ಯಕ್ಕಿಲ್ಲ. ಕಾಯಿರಿ ಎಂದು ತಿಳಿಸಿದ್ದರು.
ಆದರೆ ಸಕಾಲಕ್ಕೆ ಗಾಲಿಕುರ್ಚಿ ಸಿಗದೇ ಪತ್ನಿಯೊಂದಿಗೆ ನಡೆದೇ ಹೆಜ್ಜೆ ಹಾಕಲು ತೀರ್ಮಾನಿಸಿದ ಅಜ್ಜ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.
ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ.