ಸಾರಾಂಶ
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಸತತ 2 ದಿನ ಏರಿಕೆ ಕಂಡಿದ್ದ ಷೇರುಪೇಟೆ ಬುಧವಾರ ಕೂಡಾ ಏರಿಕೆ ಕಂಡಿದೆ.
ಮುಂಬೈ: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಸತತ 2 ದಿನ ಏರಿಕೆ ಕಂಡಿದ್ದ ಷೇರುಪೇಟೆ ಬುಧವಾರ ಕೂಡಾ ಏರಿಕೆ ಕಂಡಿದೆ. ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ 357 ಅಂಕ ಏರಿಕೆ 69653 ಅಂಕಗಳಲ್ಲಿ ಮುಕ್ತಾಯವಾಗಿದ್ದರೆ, ನಿಫ್ಟಿ 82 ಅಂಕ ಏರಿಕೆ ಕಂಡು 20937 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಎರಡೂ ಸೂಚ್ಯಂಕಗಳ ಗರಿಷ್ಠ ಪ್ರಮಾಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದು ಮತ್ತು ಜಾಗತಿಕ ಷೇರುಪೇಟೆ ಏರಿಕೆ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಗೆ ಕಾರಣವಾಗಿದೆ. ಗುರುವಾರ ಸೆನ್ಸೆಕ್ಸ್ 70000 ಅಂಕಗಳ ಮತ್ತು ನಿಫ್ಟಿ 21000 ಅಂಕಗಳ ಗಡಿ ದಾಟುವ ನಿರೀಕ್ಷೆ ಇದೆ.