ಸಾರಾಂಶ
ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳನುಸುಳುವಿಕೆಯೇ ಕಾರಣ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆಂದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
- 51ರಲ್ಲಿ ಶೇ.9.8ರಷ್ಟಿದ್ದ ಮುಸ್ಲಿಮರು 2011ರಲ್ಲಿ ಶೇ.14.2
- ಇದಕ್ಕೇ ವಿಶೇಷ ಮತಪಟ್ಟಿ ಪರಿಷ್ಕರಣೆ: ಗೃಹ ಸಚಿವಪಿಟಿಐ ನವದೆಹಲಿದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳನುಸುಳುವಿಕೆಯೇ ಕಾರಣ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆಂದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದೈನಿಕ್ ಜಾಗರಣ್ ಏರ್ಪಡಿಸಿದ್ದ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಭಾರತದಲ್ಲಿ ಮುಸ್ಲಿಮರ ಹೆಚ್ಚಳಕ್ಕೆ ಒಳನುಸುಳುವಿಕೆ ಪ್ರಮುಖ. ಸ್ವಾತಂತ್ರ್ಯದ ನಂತರ ನಡೆದ ಜನಗಣತಿಯಲ್ಲಿ ಇದು ಕಂಡುಬರುತ್ತದೆ. 1951 ರಲ್ಲಿ, ಹಿಂದೂಗಳು ಶೇ. 84ರಷ್ಟಿದ್ದರೆ, ಮುಸ್ಲಿಮರು ಶೇ. 9.8ರಷ್ಟಿದ್ದರು. 1971 ರಲ್ಲಿ ಹಿಂದೂಗಳು 82% ಹಾಗೂ ಮುಸ್ಲಿಮರು ಶೇ.11ರಷ್ಟಿದ್ದರು. 1991ರಲ್ಲಿ, ಹಿಂದೂಗಳ ಸಂಖ್ಯೆ ಶೇ.81ಕ್ಕೆ ಕುಸಿದರೆ, ಮುಸ್ಲಿಮರ ಸಂಖ್ಯೆ ಶೇ.12.21ಕ್ಕೇರಿತು. 2011ರಲ್ಲಿ ಹಿಂದುಗಳ ಸಂಖ್ಯೆ ಶೇ.79ಕ್ಕೆ ಇಳಿದು, ಮುಸ್ಲಿಮರ ಸಂಖ್ಯೆ ಶೇ.14.2ಕ್ಕೆ ಏರಿತು. 2011ರ ಜನಗಣತಿಯಲ್ಲಿ ಮುಸ್ಲಿಂ ಸಂಖ್ಯೆ ಏರಿಕೆ ಪ್ರಮಾಣ ಶೇ.24.6 ಇದ್ದರೆ ಹಿಂದುಗಳ ಜನಸಂಖ್ಯೆ ಏರಿಕೆ ಗತಿ ಶೇ.16.8ರಷ್ಟು ಇತ್ತು. ಅಸ್ಸಾಂ, ಬಂಗಾಳದಂಥ ಗಡಿಯಲ್ಲಿ ಮುಸ್ಲಿಂ ಸಖ್ಯೆ ಏರಿಕೆ ವಿಪರೀತವಾಗಿದೆ. ಒಳನುಸುಳುವಿಕೆ ಇಲ್ಲದೇ ಇದು ಸಾಧ್ಯವೇ ಇಲ್ಲ. ಇದಕ್ಕೆ ಕೆಲವು ಪಕ್ಷಗಳ ಮತಬ್ಯಾಂಕ್ ರಾಜಕೀಯ ಕಾರಣ’ ಎಂದರು. ಈ ಮೂಲಕ, ’ಒಳನುಸುಳುವಿಕೆಗೆ ಸರಿಯಾಗಿ ಗಡಿ ಕಾಯದ ಕೇಂದ್ರ ಸರ್ಕಾರದ ಅಡಿ ಬರುವ ಬಿಎಸ್‌ಎಫ್ ನಿರ್ಲಕ್ಷ್ಯ ಕಾರಣ’ ಎಂದ ಟಿಎಂಸಿ ನಾಯಕಿ ಮಮತಾ ಬ್ಯಾಣರ್ಜಿಗೆ ತಿರುಗೇಟು ನೀಡಿದರು.‘ಮತಪಟ್ಟಿ ಪರಿಷ್ಕರಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಏಕೆಂದರೆ ಇದು ದೇಶ ಹಿತಕ್ಕೆ ಸೇರಿದ ಆಂದೋಲನ. ಅಕ್ರಮ ವಲಸಿಗರನ್ನು ಮತಪಟ್ಟಿಯಿಂದ ಹೊರಹಾಕಲಾಗುತ್ತದೆ. ಮಾತ್ರವಲ್ಲದೆ ದೇಶದಿಂದಲೇ ಗಡೀಪಾರು ಮಾಡಲಾಗುತ್ತದೆ’ ಎಂದರು.