ಸಾರಾಂಶ
ಸ್ಲಂಡಾಗ್ ಮಿಲಿಯನೇರ್ ಪಾತ್ರದಲ್ಲಿ ಸಿಕ್ಕಿದ ಅವಕಾಶವನ್ನು ನಿರಾಕರಿಸಿದ್ದಾಗಿ ಶಾರೂಖ್ ಖಾನ್ ತಿಳಿಸಿದ್ದಾರೆ.
ಮುಂಬಯಿ: ಅಸ್ಕರ್ ಪ್ರಶಸ್ತಿ ವಿಜೇತ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದಲ್ಲಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಕನ ಪಾತ್ರದಲ್ಲಿ ನಟಿಸುವಂತೆ ನನಗೆ ಆಫರ್ ಬಂದಿತ್ತು.
ಆದರೆ ಆ ಪಾತ್ರ ಮಾಡುವುದನ್ನು ನಾನು ನಿರಾಕರಿಸಿದ್ದೆ ಎಂದು ನಟ ಶಾರುಖ್ ಖಾನ್ ತಿಳಿಸಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾರುಖ್ ‘ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರದಲ್ಲಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಕನ ಪಾತ್ರದಲ್ಲಿ ನಟಿಸಲು ಅವಕಾಶ ಬಂದಿತ್ತು.
ಕಾಕತಾಳೀಯವಾಗಿ ನಾನು ಅದೇ ಸಮಯದಲ್ಲಿ ನಿಜ ಜೀವನದಲ್ಲೂ ಅದೇ ಕಾರ್ಯಕ್ರಮದ ನಿರೂಪಕನಾಗಿದ್ದೆ.ಚಿತ್ರದಲ್ಲಿ ನಿರೂಪಕನ ಪಾತ್ರಧಾರಿಯು ಮೋಸ ಮಾಡುತ್ತಾನೆ ಎಂದು ಗೊತ್ತಾಯಿತು.
ಹೀಗಾಗಿ ಆ ಪಾತ್ರ ಮಾಡಲಿಲ್ಲ. ಕೊನೆಗೆ ಅನಿಲ್ ಕಪೂರ್ ಆ ಪಾತ್ರ ಮಾಡಿದರು’ ಎಂದಿದ್ದಾರೆ.