ಸಾರಾಂಶ
ಇಂದು ನನ್ನ ಪಕ್ಕ ಶಶಿ ತರೂರ್ ಇರುವುದು ಹಲವರ ನಿದ್ದೆಗೆಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ತಿರುವನಂತಪುರ: ಪ್ರಧಾನಿ ಮೋದಿ ಪರ ಮಾತನಾಡಿ ಪಕ್ಷದ ವರಿಷ್ಟರ ಕಂಗೆಣ್ಣಿಗೆ ಸಂಸದ ಶಶಿ ತರೂರ್ ಗುರಿಯಾಗಿರುವ ನಡುವೆಯೇ, ಇಂದು ನನ್ನ ಪಕ್ಕ ಶಶಿ ತರೂರ್ ಇರುವುದು ಹಲವರ ನಿದ್ದೆಗೆಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೇರಳದ ವಿಝಿಜಂನಲ್ಲಿ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರನ್ನು ಉಲ್ಲೇಖಿಸಿ ಗಮನ ಸೆಳೆದಿದ್ದಾರೆ ‘ ಇವತ್ತು ಶಶಿ ತರೂರ್ ಇಲ್ಲಿ ಕುಳಿತಿದ್ದಾರೆ.
ಈ ಕಾರ್ಯಕ್ರಮ ಹಲವರ ನಿದ್ದೆಗೆ ಭಂಗ ತರಲಿದೆ. ಈ ಸಂದೇಶವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ತಲುಪಿದೆ’ ಎಂದು ಹೇಳಿದರು. ಜೊತೆಗೆ ವೇದಿಕೆಗೆ ಆಗಮಿಸಿದ ವೇಳೆ ಅಲ್ಲಿದ್ದ ಎಲ್ಲರಿಗೂ ಕೇವಲ ನಮಸ್ಕರಿಸಿದರೆ, ತರೂರ್‌ಗೆ ಮಾತ್ರ ಮೋದಿ ಹಸ್ತಲಾಘವ ಮಾಡಿದರು.