ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಅವರ ಕೆನಡಾದ ಸರ್ರೆಯಲ್ಲಿರುವ ಕ್ಯಾಪ್ಸ್‌ ಕೆಫೆ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೊಮ್ಮೆ ದಾಳಿಯಾಗಿದೆ ಎಂದು ವರದಿಯಾಗಿದೆ.ಕಪಿಲ್ ಶರ್ಮಾ ಕೆಫೆಯ ಪಕ್ಕದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಗುಂಡು ಹಾರಿಸಲಾಗಿದೆ.

ಒಟ್ಟಾವಾ: ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಅವರ ಕೆನಡಾದ ಸರ್ರೆಯಲ್ಲಿರುವ ಕ್ಯಾಪ್ಸ್‌ ಕೆಫೆ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೊಮ್ಮೆ ದಾಳಿಯಾಗಿದೆ ಎಂದು ವರದಿಯಾಗಿದೆ.

ಶರ್ಮಾ ಮತ್ತು ರೆಸ್ಟೋರೆಂಟ್‌ ಮಾಲೀಕನಿಗೆ ಕೊಲೆ ಬೆದರಿಕೆ

ಕಪಿಲ್ ಶರ್ಮಾ ಕೆಫೆಯ ಪಕ್ಕದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಗುಂಡು ಹಾರಿಸಲಾಗಿದೆ. ಶರ್ಮಾ ಮತ್ತು ರೆಸ್ಟೋರೆಂಟ್‌ ಮಾಲೀಕನಿಗೆ ಕೊಲೆ ಬೆದರಿಕೆ ಬಂದಿದೆ. ‘ನಿಮ್ಮ ಸರದಿಗೆ ಬನ್ನಿ, ನಮ್ಮ ಸಮಯ ವ್ಯರ್ಥ ಮಾಡಬೇಡಿ.

ಇಲ್ಲದಿದ್ದರೆ ನಿಮ್ಮ ಕೆಫೆಗೂ ಇದೇ ಪರಿಸ್ಥಿತಿ ಬರಬಹುದು’ ಎಂದು ಗ್ಯಾಂಗ್‌ನಿಂದ ಬೆದರಿಕೆ ಸಂದೇಶ ಕಳಿಸಲಾಗಿದೆ ಎಂದು ಟೈಸನ್ ಬಿಷ್ಣೋಯ್ ಜೋರಾ ಸಿಧು ಎಂಬ ಫೇಸ್ಬುಕ್ ಖಾತೆಯ ವಿಡಿಯೋದಿಂದ ತಿಳಿದುಬಂದಿದೆ. 

2025ರ ಜುಲೈನಲ್ಲಿ ಶರ್ಮಾರ ನೂತನ ಕೆಫೆ ಆರಂಭ

 2025ರ ಜುಲೈನಲ್ಲಿ ಶರ್ಮಾರ ನೂತನ ಕೆಫೆ ಆರಂಭವಾದ ಕೆಲವೇ ದಿನಗಳಲ್ಲಿ ಗುಂಡಿನ ದಾಳಿ ನಡೆದಿತ್ತು. ಆಗಸ್ಟ್‌ನಲ್ಲಿ 2ನೇ ಬಾರಿ ಮತ್ತು ಅಕ್ಟೋಬರ್‌ನಲ್ಲಿ 3ನೇ ಬಾರಿ ಇದೇ ರೀತಿ ದಾಳಿಯಾಗಿತ್ತು.