ಬಾಹ್ಯಾಕಾಶದಲ್ಲಿ ಬೆಂಗಳೂರಿನ ನೀರು ಕರಡಿ ಶುಭಾಂಶು ಪ್ರಯೋಗ ಯಶಸ್ವಿ

| N/A | Published : Jul 07 2025, 12:34 AM IST / Updated: Jul 07 2025, 04:33 AM IST

ಬಾಹ್ಯಾಕಾಶದಲ್ಲಿ ಬೆಂಗಳೂರಿನ ನೀರು ಕರಡಿ ಶುಭಾಂಶು ಪ್ರಯೋಗ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ನೀರುಕರಡಿ (ವಾಯೇಜರ್‌ ಟಾರ್ಡಿಗ್ರೇಡ್) ಪ್ರಯೋಗ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಈ ಪ್ರಯೋಗವನ್ನು ಸಿದ್ಧಪಡಿಸಿತ್ತು.

ನವದೆಹಲಿ: ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ನೀರು ಕರಡಿ (ವಾಯೇಜರ್‌ ಟಾರ್ಡಿಗ್ರೇಡ್) ಪ್ರಯೋಗ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಈ ಪ್ರಯೋಗವನ್ನು ಸಿದ್ಧಪಡಿಸಿತ್ತು.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೋ, ‘ಶುಭಾಂಶು ಶುಕ್ಲಾ ಐಎಸ್‌ಎಸ್‌ನಲ್ಲಿ ನೀರು ಕರಡಿಗಳನ್ನು ಒಳಗೊಂಡ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗವನ್ನು ಪೂರ್ಣಗೊಳಿಸಿದ್ದಾರೆ. ಅಧ್ಯಯನವು ಬಾಹ್ಯಾಕಾಶದಲ್ಲಿ ಅವುಗಳ ಬದುಕುಳಿಯುವಿಕೆ, ಪುನರುಜ್ಜೀವನ ಮತ್ತು ಸಂತಾನೋತ್ಪತ್ತಿ ಮೇಲೆ ಕೇಂದ್ರೀಕರಿಸಿದೆ. ಈ ಅಧ್ಯಯನವು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ನೀರುಕರಡಿಗಳ ಜೈವಿಕ ಕಾರ್ಯವಿಧಾನಗಳ ಬಗ್ಗೆ ಅಮೂಲ್ಯ ಒಳನೋಟಗಳನ್ನು ಒದಗಿಸುತ್ತದೆ’ ಎಂದು ತಿಳಿಸಿದೆ.

14 ದಿನಗಳ ಕಾಲ ಐಎಸ್‌ಎಸ್‌ನಲ್ಲಿ ಇರಲಿರುವ ಶುಕ್ಲಾ ಒಟ್ಟು 7 ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ಈ ಪೈಕಿ 4 ಪ್ರಯೋಗಗಳನ್ನು ಕರ್ನಾಟಕದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

  • ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು
  • -ಬೆಂಗಳೂರಿನ ಐಐಎಸ್‌ಸಿ ಸಿದ್ಧಪಡಿಸಿದ್ದ ಪ್ರಯೋಗ
  • -ಗಗನಯಾತ್ರಿ ಶುಭಾಂಶು ಶುಕ್ಲಾರಿಂದ ಪೂರ್ಣ

ಐಐಎಸ್‌ಸಿಯಿಂದ 5 ವರ್ಷ ಅಧ್ಯಯನ:

ವಿಜ್ಞಾನಿ ಸಂದೀಪ್ ಈಶ್ವರಪ್ಪ ಮತ್ತು ಐಐಎಸ್‌ಸಿಯ ತಂಡವು, 5 ವರ್ಷಗಳ ಕಾಲ ನೀರುಕರಡಿಗಳ ಕುರಿತು ಅಧ್ಯಯನ ನಡೆಸಿದೆ. ಸೂಕ್ಷ್ಮ ಜೀವಿಗಳಾದ ಇವು ಮಾರಕ ಅಲ್ಟ್ರಾವೈಲಟ್ ವಿಕಿರಣಗಳಿಗೆ ಒಡ್ಡಿಕೊಂಡಾಗ, ಹಾನಿಕಾರಕ ವಿಕಿರಣಗಳನ್ನು ಹೀರಿಕೊಂಡು ನಿರಪಾಯಕಾರಿ ನೀಲಿ ವಿಕರಣಗಳನ್ನು ಹೊರಸೂಸುತ್ತವೆ. ಇವುಗಳನ್ನು ಶುಕ್ಲಾ ಜತೆ ಐಎಸ್‌ಎಸ್‌ಗೆ ಕಳಿಸಲಾಗಿತ್ತು.

Read more Articles on