ಸಾರಾಂಶ
ಸ್ಮಿತಾ ಅವರ ಪರಿಶ್ರಮಕ್ಕೆ ಉದ್ದ ಕೂದಲಿನ ಗಿನ್ನೆಸ್ ದಾಖಲೆಯ ಗರಿಯೂ ಬಂದಿದೆ
ಕೂದಲು ಕಾಪಾಡಿಕೊಳ್ಳಲು ಹೆಣ್ಣು ಮಕ್ಕಳು ಎಷ್ಟೆಲ್ಲ ಕಷ್ಟ ಪಡುತ್ತಾರೆ ಎಂಬುದನ್ನು ತಿಳಿದಿರುತ್ತೇವೆ. ಆದರೆ ಇಲ್ಲೊಬ್ಬರು ಮಹಿಳೆ ಕಳೆದ 30 ವರ್ಷಗಳಿಂದ ಕೂದಲನ್ನು ಬಹಳಷ್ಟು ಜತನದಿಂದ ಕಾಪಾಡಿಕೊಂಡು ಹೆಚ್ಚೂ ಕಡಿಮೆ 8 ಅಡಿಯಷ್ಟು ಕೂದಲು ಬೆಳೆಸಿಕೊಂಡಿದ್ದಾಳೆ. ಹೌದು 46 ವಯಸ್ಸಿನ ಉತ್ತರ ಪ್ರದೇಶದ ಸ್ಮಿತಾ ಅವರ ಪರಿಶ್ರಮಕ್ಕೆ ಉದ್ದ ಕೂದಲಿನ ಗಿನ್ನೆಸ್ ದಾಖಲೆಯ ಗರಿಯೂ ಬಂದಿದೆ. ಅಂದಹಾಗೆ ಈಕೆ ಕೂದಲು ಕಾಪಾಡಿಕೊಳ್ಳಲೆಂದೇ ದಿನಕ್ಕೆ ಸರಾಸರಿ ಮುಕ್ಕಾಲು ಗಂಟೆ ವ್ಯಯಿಸುತ್ತಾಳಂತೆ.