ಗೆಳೆಯ ಜಹೀರ್‌ ಜೊತೆಗೆ ಸೋನಾಕ್ಷಿ ಸಿನ್ಹಾ ಮದ್ವೆ ದಾಂಪತ್ಯಕ್ಕೆ ಕಾಲಿಟ್ಟ ಸೋನಾಕ್ಷಿ

| Published : Jun 24 2024, 01:38 AM IST / Updated: Jun 24 2024, 03:50 AM IST

Sonakshi Sinha, Zaheer Iqbal married
ಗೆಳೆಯ ಜಹೀರ್‌ ಜೊತೆಗೆ ಸೋನಾಕ್ಷಿ ಸಿನ್ಹಾ ಮದ್ವೆ ದಾಂಪತ್ಯಕ್ಕೆ ಕಾಲಿಟ್ಟ ಸೋನಾಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹತ್ತಿರದ ಬಂಧುಮಿತ್ರರ ಸಮ್ಮುಖದಲ್ಲಿ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್‌ ಕೈಹಿಡಿದಿದ್ದು, ಕೆಲ ದಿನಗಳಿಂದ ಹರಿದಾಡುತ್ತಿದ್ದ ಅವರಿಬ್ಬರ ಸಂಬಂಧದ ಬಗೆಗಿನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹತ್ತಿರದ ಬಂಧುಮಿತ್ರರ ಸಮ್ಮುಖದಲ್ಲಿ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್‌ ಕೈಹಿಡಿದಿದ್ದು, ಕೆಲ ದಿನಗಳಿಂದ ಹರಿದಾಡುತ್ತಿದ್ದ ಅವರಿಬ್ಬರ ಸಂಬಂಧದ ಬಗೆಗಿನ ವದಂತಿಗಳಿಗೆ ತೆರೆ ಎಳೆದಿದ್ದಾರೆ. 

ಮುಂಬೈನ ಸೋನಾಕ್ಷಿ ಸಿನ್ಹಾ ಮನೆಯಲ್ಲಿ ವಿವಾಹ ನೆರವೇರಿದೆ. ಇನ್ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡ ಜೋಡಿ, ‘7 ವರ್ಷದ ಹಿಂದ ಇಬ್ಬರ ಕಣ್ಣುಗಳಲ್ಲೂ ಕಂಡ ಪವಿತ್ರ ಪ್ರೀತಿ ನಿಮ್ಮಿಬ್ಬರನ್ನು ಸೋಲು ಗೆಲುವಿನ ಹಾದಿಯಲ್ಲಿ ನಡೆಸಿಕೊಂಡು ಇಲ್ಲಿಯವರೆಗೆ ಕರೆತಂದಿದೆ. ಇಬ್ಬರ ಕುಟುಂಬ ಹಾಗೂ ದೇವರುಗಳ ಆಶೀರ್ವಾದದೊಂದಿಗೆ ನಾವೀಗ ಪತಿ-ಪತ್ನಿಯಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಗೆಳತಿ, ರೂಪದರ್ಶಿ ಜೊತೆ ಉದ್ಯಮಿ ವಿಜಯ್‌ ಮಲ್ಯ ಪುತ್ರ ಸಿದ್ದಾರ್ಥ್‌ ಮದುವೆ

ಮುಂಬೈ: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯರ ಪುತ್ರ ಸಿದ್ದಾರ್ಥ್‌ ಮಲ್ಯ ತಮ್ಮ ಗೆಳತಿ, ರೂಪದರ್ಶಿ ಜಾಸ್ಮಿನ್‌ ಅವರನ್ನು ವಿವಾಹವಾಗಿದ್ದಾರೆ. 

ಕ್ರೈಸ್ತ ಸಂಪ್ರದಾಯದಂತೆ ವಿವಾಹ ನೆರವೇರಿದೆ. ಜಾಸ್ಮಿನ್ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮದುವೆ ಉಂಗುರದೊಂದಿಗೆ ವಿವಾಹ ಖುಷಿ ಹಂಚಿಕೊಂಡಿರುವ ಜಾಸ್ಮಿನ್‌ ‘ಎಂದೆಂದಿಗೂ’ ಎಂದು ಕ್ಯಾಪ್ಷನ್‌ ಬರೆದು ಸಿದ್ಧಾರ್ಥ್‌ರನ್ನು ಟ್ಯಾಗ್‌ ಮಾಡಿದ್ದಾರೆ. ಮದುವೆಯಲ್ಲಿ ಜಾಸ್ಮಿನ್ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದರೆ, ಸಿದ್ಧಾರ್ಥ್‌ ಸೂಟ್‌ನಲ್ಲಿ ಕಂಗೊಳಿಸಿದ್ದಾರೆ. ಲಂಡನ್‌ನ ಐಷಾರಾಮಿ ಬಂಗಲೆಯಲ್ಲಿ ಮದುವೆ ನಡೆದಿದೆ.