ಪ್ರಸಕ್ತ 2024ನೇ ಸಾಲಿನ ಮಿಸ್‌ ಗ್ಲೋಬಲ್‌ ಇಂಡಿಯಾ ಗೌರವಕ್ಕೆ ಕರ್ನಾಟಕದ ಸೌಮ್ಯಾಗೆ ಪಟ್ಟ

| Published : Oct 05 2024, 01:30 AM IST / Updated: Oct 05 2024, 05:40 AM IST

Soumya

ಸಾರಾಂಶ

ಪ್ರಸಕ್ತ ಸಾಲಿನ ಮಿಸ್‌ ಗ್ಲೋಬಲ್‌ ಇಂಡಿಯಾ ಗೌರವಕ್ಕೆ ಕರ್ನಾಟಕದ ಶಿವಮೊಗ್ಗ ಮೂಲದ ಸೌಮ್ಯ ಪಾತ್ರರಾಗಿದ್ದಾರೆ.

ನವದೆಹಲಿ: ಪ್ರಸಕ್ತ ಸಾಲಿನ ಮಿಸ್‌ ಗ್ಲೋಬಲ್‌ ಇಂಡಿಯಾ ಗೌರವಕ್ಕೆ ಕರ್ನಾಟಕದ ಶಿವಮೊಗ್ಗ ಮೂಲದ ಸೌಮ್ಯ ಪಾತ್ರರಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಜೈಪುರದಲ್ಲಿ ನಡೆದ 2024ನೇ ಸಾಲಿನ ಮಿಸ್‌ ಗ್ಲೋಬಲ್‌ ಇಂಡಿಯಾ ಫೈನಲ್‌ನಲ್ಲಿ ಸೌಮ್ಯಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. 

ಸೌಮ್ಯಾ, ಅ.15ರಿಂದ ಅಲ್ಬೇನಿಯಾದಲ್ಲಿ ನಡೆಯುವ ಮಿಸ್‌ ಗ್ಲೋಬಲ್‌ ಇಂಟರ್‌ನ್ಯಾಷನಲ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸೌಮ್ಯಾ 2022ರಲ್ಲಿ ಮಿಸ್‌ ಕರ್ನಾಟಕ ಆಗಿ ಆಯ್ಕೆಯಾಗಿದ್ದರು. ಮಾಡೆಲ್‌ ಆಗಿ ಗುರುತಿಸಿಕೊಂಡಿರುವ ಸೌಮ್ಯಾ ಶೀಘ್ರವೇ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ.