ಲಂಕಾ ಮಾಜಿ ಅಧ್ಯಕ್ಷ ವಿಕ್ರಮ ಸಿಂಘೆ ಬಂಧನ

| N/A | Published : Aug 23 2025, 02:00 AM IST / Updated: Aug 23 2025, 04:35 AM IST

Ranil Wickremesinghe

ಸಾರಾಂಶ

ಸರ್ಕಾರಿ ಹಣ ದುರ್ಬಳಕೆ ಆರೋಪದ ಮೇಲೆ ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರನ್ನುಶುಕ್ರವಾರ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

  ಕೊಲಂಬೋ :  ಸರ್ಕಾರಿ ಹಣ ದುರ್ಬಳಕೆ ಆರೋಪದ ಮೇಲೆ ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರನ್ನುಶುಕ್ರವಾರ ಬಂಧಿಸಲಾಗಿದೆ.

ರನಿಲ್‌ ಅವರು 2023ರಲ್ಲಿ ಅಮೆರಿಕಕ್ಕೆ ಅಧಿಕೃತ ಭೇಟಿದ್ದರು. ಅಲ್ಲಿಂದ ಸ್ವದೇಶಕ್ಕೆ ಮರಳುವ ವೇಳೆ ಖಾಸಗಿ ಕಾರ್ಯಕ್ರಮವಾದರೂ ಸರ್ಕಾರಿ ಹಣದಲ್ಲಿ ಬ್ರಿಟನ್‌ಗೆ ತೆರಳಿದ್ದರು ಹಾಗೂ ತಮ್ಮ ಪತ್ನಿ ಪ್ರೊ. ಮೈತ್ರಿ ಅವರ ಕಾಲೇಜಿನ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಲಂಕಾ ಸಿಐಡಿ, ವಿಕ್ರಮಸಿಂಘೆ ಅವರನ್ನು ಶುಕ್ರವಾರ ವಿಚಾರಣೆ ನಡೆಸಿ ಬಂಧಿಸಿತು. ಬಳಿಕ ಕೋರ್ಟು ಅವರನ್ನು ಆ.26ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಇದರ ಬೆನ್ನಲ್ಲೇ ಕೋಳ ತೊಡಿ​ಸಿ ಜೈಲಿ​ಗ​ಟ್ಟ​ಲಾ​ಗಿ​ದೆ.

6 ಬಾರಿ ಲಂಕಾ ಪ್ರಧಾನಿಯಾಗಿದ್ದ ವಿಕ್ರಮಸಿಂಘೆ ಅವರು, ಶ್ರೀಲಂಕಾ ಆಥಿಕ ಸಂಕಷ್ಟದಲ್ಲಿದ್ದಾಗ 2022ರಿಂದ 2024ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Read more Articles on