‘ನನ್ನ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸಂಪರ್ಕದ ಪರವಾನಗಿಗೆ ಭಾರತದಲ್ಲಿ ಕೆಲವು ಉದ್ಯಮಿಗಳು ಅಡ್ಡಿಯಾಗಿದ್ದಾರೆ’ ಎಂದಿದ್ದ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್ ವಾಗ್ದಾಳಿ ಮುಂದುವರಿಸಿದ್ದಾರೆ ಹಾಗೂ ‘ಭಾರತದ ಬಾಸ್‌ ಅಂಬಾನಿಯೆ?’ ಎಂದು ಪ್ರಶ್ನಿಸಿದ್ದಾರೆ.

ವಾಷಿಂಗ್ಟನ್‌: ‘ನನ್ನ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸಂಪರ್ಕದ ಪರವಾನಗಿಗೆ ಭಾರತದಲ್ಲಿ ಕೆಲವು ಉದ್ಯಮಿಗಳು ಅಡ್ಡಿಯಾಗಿದ್ದಾರೆ’ ಎಂದಿದ್ದ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್ ವಾಗ್ದಾಳಿ ಮುಂದುವರಿಸಿದ್ದಾರೆ ಹಾಗೂ ‘ಭಾರತದ ಬಾಸ್‌ ಅಂಬಾನಿಯೆ?’ ಎಂದು ಪ್ರಶ್ನಿಸಿದ್ದಾರೆ.

ಗುರುವಾರ ಟ್ವೀಟ್‌ ಮಾಡಿರುವ ಅವರು ‘ಸ್ಟಾರ್‌ಲಿಂಕ್ 165 ಕ್ಕೂ ಹೆಚ್ಚು ದೇಶಗಳಲ್ಲಿ ಪರವಾನಗಿ ಪಡೆದಿದೆ ಮತ್ತು ಭಾರತ ಸರ್ಕಾರದ ಪ್ರತಿ ಕಾನೂನು ಮತ್ತು ಅವಶ್ಯಕತೆಗಳನ್ನು ಅನುಸರಿಸಲು 5 ವರ್ಷ ಕಳೆದಿದೆ, ಹಾಗಾದರೆ ಇನ್ನೂ ಪರವಾನಗಿ ಏಕೆ ಇಲ್ಲ?’ ಎಂದು ಕೇಳಿದ್ದಾರೆ. ‘ಭಾರತದ ನಿಜವಾದ ಬಾಸ್ ಅಂಬಾನಿಯೆ?’ ಎಂದು ಪ್ರಶ್ನಿಸಿದ್ದಾರೆ.

‘ಇಂಟರ್ನೆಟ್‌ ಇಲ್ಲದ ಅನೇಕ ಗ್ರಾಮಗಳು ಭಾರತದಲ್ಲಿವೆ. ಅವುಗಳಿಗೆ ಸೇವೆ ನೀಡುವುದಷ್ಟೇ ನನ್ನ ಉದ್ದೇಶ’ ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್‌ ಪ್ರತಿಕ್ರಿಯೆ-ಮಸ್ಕ್‌ ಧನ್ಯವಾದ:

ಈ ಟ್ವೀಟ್‌ಗೆ ಕಾಂಗ್ರೆಸ್ಸಿಗ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿ, ‘ಭಾರತಕ್ಕೆ ಸ್ವಾಗತ ಎಲಾನ್‌. ನೀವು ಇನ್ನೊಬ್ಬ ವ್ಯಕ್ತಿಯನ್ನು ಕಂಡುಹಿಡಿಯುವವರೆಗೆ ಕಾಯಿರಿ’ ಎಂದಿದ್ದಾರೆ. ಇದಕ್ಕೆ ಮಸ್ಕ್, ‘ಧನ್ಯವಾದಗಳು ರಾಹುಲ್. ಇದು ನಿಜಕ್ಕೂ ತೊಂದರೆದಾಯಕ’ ಎಂದು ಪ್ರತಿಕ್ರಿಯಿಸಿದ್ದಾರೆ.