ಸಾರಾಂಶ
ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಖಾಸಗಿ ಟ್ಯೂಷನ್ ಸೆಂಟರ್‌ಗಳ ದುಬಾರಿ ಶುಲ್ಕ, ಖಾಸಗಿ ಶಾಲೆಗಳು ಪ್ರತಿ ವರ್ಷ ಶುಲ್ಕ ಹೆಚ್ಚಿಸುವುದು ಮತ್ತು ಇಂಥದ್ದೇ ಮಳಿಗೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರದ ಖರೀದಿಸಬೇಕೆಂಬ ಆದೇಶಗಳಿಗೆ ಕಡಿವಾಣ ಹಾಕಲು ಮಂದಾಗಿದೆ.
ಮುಂಬೈ: ಶಿಕ್ಷಣದಲ್ಲಿ ವಾಣಿಜ್ಯೀಕರಣ ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಖಾಸಗಿ ಟ್ಯೂಷನ್ ಸೆಂಟರ್‌ಗಳ ದುಬಾರಿ ಶುಲ್ಕ, ಖಾಸಗಿ ಶಾಲೆಗಳು ಮನಸ್ಸಿಗೆ ಬಂದಂತೆ ಪ್ರತಿ ವರ್ಷ ಶುಲ್ಕ ಹೆಚ್ಚಿಸುವುದು ಮತ್ತು ಇಂಥದ್ದೇ ಮಳಿಗೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರದ ಖರೀದಿಸಬೇಕೆಂಬ ಆದೇಶಗಳಿಗೆ ಕಡಿವಾಣ ಹಾಕಲು ಮಂದಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಇಂಥ ಸುಲಿಗೆ ನೀತಿ ವಿರುದ್ಧ ನಿಯಂತ್ರಣ ಕಾಯ್ದೆ ರಚನೆಗೆ ಸರ್ಕಾರ ನಿರ್ಧರಿಸಿದೆ. ಈ ಕುರಿತು ಮಹಾರಾಷ್ಟ್ರ ಶಿಕ್ಷಣ ಸಚಿವ ದಾದಾಜಿ ಭೂಸೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ‘ ಕಾಲೇಜುಗಳು ಮತ್ತು ಖಾಸಗಿ ಟ್ಯೂಷನ್‌ಗಳ ನಡುವಿನ ಸಂಬಂಧ ಪರಿಶೀಲನೆಗೆ ಖಾಸಗಿ ತರಬೇತಿ ನಿಯಂತ್ರಣ ಕಾಯ್ದೆ ರಚಿಸಲಾಗಿತ್ತದೆ ಶಾಲೆಗಳು ಅನುಮೋದಿತ ಶುಲ್ಕ ರಚನೆಯನ್ನು ಮೀರಿ ಶುಲ್ಕ ವಿಧಿಸುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಶಿಕ್ಷಣವು ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ, ವ್ಯವಹಾರವಲ್ಲ’ ಎಂದರು.