ವಿಪಕ್ಷಗಳ ಬಳಸಿ ತೈವಾನ್‌ ವಶಕ್ಕೆಪಡೆಯಲು ಚೀನಾ ಸರ್ಕಾರ ಸಂಚು

| Published : May 29 2024, 12:55 AM IST

ಸಾರಾಂಶ

ತನ್ನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿರುವ ಚೀನಾ ಸರ್ಕಾರದ ನಿಲುವು ಹೊಂದಿರುವ ಹಲವು ನಿರ್ಣಯಗಳನ್ನು ತೈವಾನ್‌ ಸಂಸತ್‌ ಅಂಗೀಕರಿಸಿದೆ.

ತೈಪೆ: ತನ್ನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿರುವ ಚೀನಾ ಸರ್ಕಾರದ ನಿಲುವು ಹೊಂದಿರುವ ಹಲವು ನಿರ್ಣಯಗಳನ್ನು ತೈವಾನ್‌ ಸಂಸತ್‌ ಅಂಗೀಕರಿಸಿದೆ. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ ವಿಪಕ್ಷಗಳ ಬಹುಮತ ಹೊಂದಿರುವ ತೈವಾನ್‌ನ ಸಂಸತ್‌ನಲ್ಲಿ ಈ ಬೆಳವಣಿಗೆ ನಡೆದಿದೆ.

ಇದು ವಿಪಕ್ಷಗಳನ್ನು ಬಳಸಿಕೊಂಡು ತೈವಾನ್‌ ವಶಕ್ಕೆ ಚೀನಾದ ಕಮ್ಯನಿಸ್ಟ್‌ ಸರ್ಕಾರ ಯತ್ನಿಸುತ್ತಿರಬಹುದು ಎಂಬ ಅನುಮಾನಗಳಿಗೆ ಕಾರಣವಾಗಿದೆ.

ತೈವಾನ್‌ನ ವಿಪಕ್ಷಗಳಾದ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಅದರ ಮಿತ್ರಪಕ್ಷಗಳು ಮಂಡಿಸಿ ಅಂಗೀಕರಿಸಿದ ನಿರ್ಣಯಗಳ ಅನ್ವಯ ಹಲವು ಆಡಳಿತಾತ್ಮಕ ವಿಷಯಗಳಲ್ಲಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ, ರಕ್ಷಣಾ ವೆಚ್ಚ ನಿಯಂತ್ರಿಸುವ ಅಂಶಗಳಿವೆ. ಜೊತೆಗೆ ದೇಶವನ್ನೇ ಚೀನಾದೊಂದಿಗೆ ವಿಲೀನಗೊಳಿಸುವ ಅಂಶಗಳೂ ಒಳಗೊಂಡಿವೆ.ಈ ಬದಲಾವಣೆಯನ್ನು ಸಂಸತ್ತಿನಗೆ ಹೊರಗೆ ಸೇರಿದ್ದ ಸಾವಿರಾರು ಜನರು ಘೋಷಣೆಗಳ ಮೂಲಕ ವಿರೋಧಿಸಿದ್ದಾರೆ.