ಭಾರತದ ಸೇನೆಯ ಭಾಗವಾಗಿರುವ ಸಿ-130 ಜೆ ವಿಮಾನಗಳ ನಿರ್ವಹಣೆಗೆಂದೇ ಅತ್ಯಾಧುನಿಕ ಘಟಕವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಸೋಮವಾರ ಇದರ ಶಂಕುಸ್ಥಾಪನೆ ನೆರವೇರಿದೆ.
- ಟಾಟಾ, ಲಾಕ್‌ಹೀಡ್ ಮಾರ್ಟಿನ್ ಜಂಟಿ ನಿರ್ಮಾಣ
- ದೇಶದ ಮೊದಲ, ವಿಶ್ವದ 14ನೇ ಎಂಆರ್‌ಓ ಕೇಂದ್ರಪಿಟಿಐ ನವದೆಹಲಿ
ಭಾರತದ ಸೇನೆಯ ಭಾಗವಾಗಿರುವ ಸಿ-130 ಜೆ ವಿಮಾನಗಳ ನಿರ್ವಹಣೆಗೆಂದೇ ಅತ್ಯಾಧುನಿಕ ಘಟಕವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಸೋಮವಾರ ಇದರ ಶಂಕುಸ್ಥಾಪನೆ ನೆರವೇರಿದೆ.ವಿಮಾನದ ನಿರ್ಮಾಣ ಸಂಸ್ಥೆಯಾದ ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಜೊತೆಗೂಡಿ ಭಾರತದ ಟಾಟಾ ಅಡ್ವಾನ್ಸ್ಡ್‌ಸಿಸ್ಟಮ್ಸ್ ಈ ಘಟಕ ಸ್ಥಾಪಿಸುತ್ತಿವೆ. ಬೆಂಗಳೂರು ಅತ್ಯಂತ ಆಯಕಟ್ಟಿನ ಸ್ಥಳವಾಗಿರುವ ಕಾರಣ ಇಲ್ಲಿ ಎಂಆರ್‌ಓ ಘಟಕ ತೆರೆಯಲಾಗುತ್ತಿದ ಎಂದು ಉಭಯ ಕಂಪನಿಗಳೂ ಹೇಳಿವೆ.
ಹೊಸದಾಗಿ ನಿರ್ಮಿಸಲಾಗುತ್ತಿರುವ ಎಂಆರ್‌ಓ ಕೇಂದ್ರವು ಸಿ-130 ಜೆ ವಿಮಾನಗಳ ನಿರ್ವಹಣೆ, ಉಪಕರಣಗಳ ರಿಪೇರಿ, ಪರಿಶೀಲನೆ ಮತ್ತು ಪರೀಕ್ಷೆಗಳನ್ನು ನಡೆಸುತ್ತದೆ. ಜೊತೆಗೆ ವಿಮಾನಗಳ ತಾಂತ್ರಿಕ ಉನ್ನತೀಕರಣ, ಭಾರತೀಯ ಎಂಜಿನಿಯರ್ ಮತ್ತು ನಿರ್ವಹಕರಿಗೆ ತರಬೇತಿಯನ್ನು ಕೊಡುತ್ತದೆ. ಸಿ-130ಜೆ ಜೊತೆಯಲ್ಲಿ ಭವಿಷ್ಯದಲ್ಲಿ ಕೆಸಿ-130ಜೆ, ಸಿ-130ಬಿ-ಎಚ್ ವಿಮಾನಗಳನ್ನು ನಿರ್ವಹಿಸುವ ಅಂಶಗಳನ್ನು ಇವು ಹೊಂದಿದೆ.ಭಾರತದ ಮೊದಲ ಎಂಆರ್‌ಓ ಕೇಂದ್ರ:
ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಎಂಆರ್‌ಓ ದೇಶದ ಮೊದಲನೆಯದ್ದಾಗಿದೆ. ಮುಂದಿನ ವರ್ಷದಾಂತ್ಯಕ್ಕೆ ಕಾಮಗಾರಿ ಅಂತ್ಯಗೊಳ್ಳಲಿದ್ದು, ವಿಶ್ವದ 14ನೇ ಸಿ-130 ಜೆ ವಿಮಾನದ ಎಂಆರ್‌ಓ ಕೇಂದ್ರವಾಗಲಿದೆ.