ಸಾರಾಂಶ
ನವದೆಹಲಿ: ಹೆಚ್ಚು ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡುವ ವೇಳೆ ರಸ್ತೆ ತೆರಿಗೆ ಮೇಲೆ ನೀಡುವ ತೆರಿಗೆ ರಿಯಾಯ್ತಿಯನ್ನು ಕೇಂದ್ರ ಸರ್ಕಾರ ಹಾಲಿ ಇರುವ ಶೇ.25ರಿಂದ ಶೇ.50ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.
ನವದೆಹಲಿ: ಹೆಚ್ಚು ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡುವ ವೇಳೆ ರಸ್ತೆ ತೆರಿಗೆ ಮೇಲೆ ನೀಡುವ ತೆರಿಗೆ ರಿಯಾಯ್ತಿಯನ್ನು ಕೇಂದ್ರ ಸರ್ಕಾರ ಹಾಲಿ ಇರುವ ಶೇ.25ರಿಂದ ಶೇ.50ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.
ಇಂಥದ್ದೊಂದು ಪ್ರಸ್ತಾವಣೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮುಂದಿಟ್ಟಿದ್ದು, ಈ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಪ್ರಸ್ತುತ ತಮ್ಮ ಹಳೆಯ ವೈಯುಕ್ತಿಕ ವಾಹನಗಳನ್ನು ಸ್ಕ್ರ್ಯಾಪ್‌ಗೆ ಹಾಕಿ ಹೊಸ ವಾಹನವನ್ನು ಖರೀದಿಸಲು ಮೋಟಾರು ವಾಹನ ತೆರಿಗೆಯಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ಸರ್ಕಾರ ನೀಡುತ್ತಿತ್ತು. ವಾಣಿಜ್ಯ ವಾಹನಗಳಿಗೆ ಶೇ.15ರಷ್ಟು ರಿಯಾಯಿತಿ ನೀಡುತ್ತಿದೆ. ಇದೀಗ ಆ ಪ್ರಮಾಣದಲ್ಲಿ ಹೆಚ್ಚಳಕ್ಕೆ ಮುಂದಾಗಿದೆ.
ಈ ಬಗ್ಗೆ ಸಚಿವಾಲಯ ಕರಡು ಸೂಚನೆಯನ್ನು ಹೊರಡಿಸಿದ್ದು, ವೈಯುಕ್ತಿಕ ಮತ್ತು ವಾಣಿಜ್ಯ ಎರಡೂ ವಾಹನಗಳಿಗೆ ಶೇ.50ರಷ್ಟು ತೆರಿಗೆ ರಿಯಾಯಿತಿಗೆ ಮುಂದಾಗಿದೆ. ಬಿಎಸ್ ಮಾನದಂಡಗಳನ್ನು ಪೂರೈಸುವ ವಾಹನಗಳಿಗೆ ಇದು ಅನ್ವಯವಾಗಲಿದೆ. ನಿಮ್ಮ ಕಾರು( ಡಿಸೇಲ್) 10 ವರ್ಷ ಹಳೆಯದಾಗಿದ್ದರೆ ಅಥವಾ ಕಾರು (ಪೆಟ್ರೋಲ್) 15 ವರ್ಷ ಹಳೆಯದ್ದಾಗಿದ್ದರೆ ನೀವು ಸ್ಕ್ರ್ಯಾಪ್ ಪಾಲಿಸಿ ಪ್ರಯೋಜನ ಪಡೆಯಬಹುದು. ಸಚಿವಾಲಯವು ಮಾಲಿನ್ಯಕಾರಕ ವಾಹನಗಳನ್ನು ತೆಗೆದು ಹಾಕಲು ಹೊಸ ನೀತಿಜಾರಿಗೆ ತಂದಿದೆ..