ಸಾರಾಂಶ
ಪೌರತ್ವ ತಿದ್ದುಪಡಿ ಕಾಯ್ದಯಡಿ ಪೌರತ್ವ ಬಯಸುವ ಪುರುಷನ ಧರ್ಮವನ್ನು ನಿರ್ಧರಿಸಲು ಸುನ್ನತಿ ಪರೀಕ್ಷೆ ನಡೆಯಬೇಕು ಎಂದು ಮೇಘಾಲಯ ಮಾಜಿ ರಾಜ್ಯಪಾಲ ತಥಾಗತ ರಾಯ್ ಸಲಹೆ ನೀಡಿದ್ದಾರೆ.
ಕೋಲ್ಕತಾ: ‘ಕಳೆದ ವಾರ ಜಾರಿಗೊಳಿಸಲಾದ ಪೌರತ್ವ (ತಿದ್ದುಪಡಿ) ಕಾಯ್ದೆಯಡಿ ಪೌರತ್ವ ಬಯಸುವ ಪುರುಷನ ಧರ್ಮವನ್ನು ನಿರ್ಧರಿಸಲು ಸುನ್ನತಿ ಪರೀಕ್ಷೆ ನಡೆಯಬೇಕು’ ಎಂದು ಪ.ಬಂಗಾಳ ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯ ಮಾಜಿ ರಾಜ್ಯಪಾಲ ತಥಾಗತ ರಾಯ್ ಸಲಹೆ ನೀಡಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.ಟ್ವೀಟ್ ಮಾಡಿರುವ ಅವರು, ‘ಪುರುಷನು ಸುನ್ನತಿ ಮಾಡಿಸಿಕೊಂಡಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ದೊಡ್ಡ ವಿಷಯ. ಸಿಎಎ ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದ ಮುಸ್ಲಿಮರಿಗೆ ಪೌರತ್ವಕ್ಕೆ ಅವಕಾಶವಿಲ್ಲ. ಅಲ್ಲಿಂದ ಬಂದ ಮುಸ್ಲಿಮೇತರರಿಗೆ ಮಾತ್ರ ಅವಕಾಶವಿದೆ. ಆದ್ದರಿಂದ, ಅನುಮಾನವಿದ್ದಲ್ಲಿ ಈ ಪರೀಕ್ಷೆ ಮಾಡಬಹುದು’ ಎಂದಿದ್ದಾರೆ.
ರಾಯ್ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಖಂಡಿಸಿದೆ. ಇದು ಮತಾಂಧತೆಯ ಅತಿರೇಕ ಎಂದು ಕಿಡಿಕಾರಿದೆ.