ಸಾರಾಂಶ
ಪೆಬ್ರವರಿ ತಿಂಗಳಲ್ಲಿ ತಿರುಪತಿ ತಿರುಮಲ ದೇಗುಲದ ಹುಂಡಿಯಲ್ಲಿ 111.71 ಕೋಟಿ ರು. ಹಣ ಸಂಗ್ರಹವಾಗಿದೆ
ತಿರುಮಲ: ಪೆಬ್ರವರಿ ತಿಂಗಳಲ್ಲಿ ತಿರುಪತಿ ತಿರುಮಲ ದೇಗುಲದ ಹುಂಡಿಯಲ್ಲಿ 111.71 ಕೋಟಿ ರು. ಹಣ ಸಂಗ್ರಹವಾಗಿದೆ. ಇದರೊಂದಿಗೆ ಸತತ 24ನೇ ತಿಂಗಳು ಹುಂಡಿಯಲ್ಲಿ 110 ಕೋಟಿ ರು.ಗಿಂತ ಹೆಚ್ಚು ಹಣ ಸಂಗ್ರಹವಾದಂತೆ ಆಗಿದೆ.
ಈ ಕುರಿತು ಮಾಹಿತಿ ನೀಡಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ, ‘ಫೆಬ್ರವರಿಯಲ್ಲಿ 19.06 ಲಕ್ಷ ಭಕ್ತರ ದೇವರ ದರ್ಶನ ಪಡೆದಿದ್ದು, ಹುಂಡಿಯಿಂದ 111.71 ಕೋಟಿ ರು. ಆದಾಯ ಸಂಗ್ರಹವಾಗಿದೆ. 2022ರ ಫೆಬ್ರವರಿಯಿಂದಲೂ ದೇವಾಲಯದ ಹುಂಡಿ ಆದಾಯದಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ ಎಂದು ಹೇಳಿದರು.
ಬೇಸಿಗೆ ತಿಂಗಳಾದ ಏಪ್ರಿಲ್‌ನಿಂದ ಜೂನ್‌ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ವಿಶೇಷ ದರ್ಶನ, ವಿಐಪಿ ದರ್ಶನ, ಪ್ರವಾಸ್ಯೋದ್ಯಮ ಕೋಟಾ ಟಿಕೆಟ್‌ಗಳನ್ನುಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲು ಸೂಚಿಸಲಾಗಿದೆ.