ಸಾರಾಂಶ
ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಈ ಹಿಂದೆ ದಿಲ್ಲಿ ಪಾಲಿಕೆ ಸದಸ್ಯೆ ಆಗಿದ್ದಾಗ ಹಾಗೂ ಬಿಜೆಪಿ ನಾಯಕಿ ಆಗಿದ್ದಾಗ ಸಾರ್ವಜನಿಕವಾಗಿ ವರ್ತಿಸಿದ ಹಲವು ವಿಡಿಯೋಗಳು ವೈರಲ್ ಆಗಿವೆ.
ನವದೆಹಲಿ: ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಈ ಹಿಂದೆ ದಿಲ್ಲಿ ಪಾಲಿಕೆ ಸದಸ್ಯೆ ಆಗಿದ್ದಾಗ ಹಾಗೂ ಬಿಜೆಪಿ ನಾಯಕಿ ಆಗಿದ್ದಾಗ ಸಾರ್ವಜನಿಕವಾಗಿ ವರ್ತಿಸಿದ ಹಲವು ವಿಡಿಯೋಗಳು ವೈರಲ್ ಆಗಿವೆ.
2023ರಲ್ಲಿ ಆಪ್-ಬಿಜೆಪಿ ಸದಸ್ಯರ ನಡುವೆ ದಿಲ್ಲಿ ಪಾಲಿಕೆಯಲ್ಲಿ ಸಂಘರ್ಷ ನಡೆದಾಗ ಪಾಲಿಕೆಯ ಸದನದ ಪೋಡಿಯಂ ಅನ್ನು ರೇಖಾ ಧ್ವಂಸ ಮಾಡಿ ಸುದ್ದಿ ಮಾಡಿದ್ದರು. ಆ ವಿಡಿಯೋ ಈಗ ಹರಿದಾಡುತ್ತಿದೆ. ಇದರ ನಡುವೆ, ಅಂದಿನ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಅವರು ಬಳಸಿದ ಭಾಷೆಯ ವಿಡಿಯೋ ಕೂಡ ಮತ್ತೆ ಚಾಲ್ತಿ ಪಡೆದಿವೆ.ಗುಪ್ತಾ ಅವರ ಹಳೆಯ ಟ್ವೀಟ್‌ಗಳ ಬಗ್ಗೆ ಪೋಸ್ಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ , ‘ಕಠಿಣ ಪರಿಶ್ರಮಿ ಮತ್ತು ದಯೆಯುಳ್ಳ ಶೀಲಾ ದೀಕ್ಷಿತ್ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದ ಸುಷ್ಮಾ ಸ್ವರಾಜ್ ಅವರ ಮಾತುಗಳಿಗಿಂತ ರೇಖಾ ಗುಪ್ತಾ ಅವರ ನಿಂದನಾತ್ಮಕ ನಡೆ ನುಡಿ ತುಂಬಾ ಭಿನ್ನವಾಗಿದೆ. ಆದರೆ ಇದು ‘ಹೊಸ’ ಬಿಜೆಪಿ.. ಅಲ್ಲಿ ನಿಂದನೆ ಹಾಗೂ ಕೆಟ್ಟ ವರ್ತನೆ ಸಾಮಾನ್ಯ’ ಎಂದಿದ್ದಾರೆ.