ಸಾರಾಂಶ
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 12 ಜನರು ಬುಧವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನವದೆಹಲಿ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 12 ಜನರು ಬುಧವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ನೂತನ ಸದಸ್ಯರಿಗೆ ಗೋಪ್ಯತೆಯ ವಿಧಿ ಬೋಧಿಸಿದರು.
ಇವರಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಆಯ್ಕೆಯಾದ ಜಿ.ಸಿ.ಚಂದ್ರಶೇಖರ್ ಕೂಡಾ ಸೇರಿದ್ದಾರೆ. ಉಳಿದಂತೆ ಕೇಂದ್ರ ಸಚಿವ ಎಲ್. ಮುರುಗನ್ ಹಾಗೂ ಧರ್ಮಶೀಲಾ ಗುಪ್ತಾ, ಮನೋಜ್ ಕುಮಾರ್ ಝಾ, ಸಂಜಯ್ ಯಾದವ್, ಗೋವಿಂದಭಾಯ್ ಲಾಲ್ಜಿಭಾಯಿ ಧೋಲಾಕಿಯಾ, ಸುಭಾಷ್ ಚಂದರ್, ಹರ್ಷ್ ಮಹಾಜನ್, ಅಶೋಕ್ ಸಿಂಗ್, ಚಂದ್ರಕಾಂತ್ ಹಂದೋರೆ, ಮೇಧಾ ವಿಶ್ರಮ್ ಕುಲಕರ್ಣಿ ಮತ್ತು ಸಾಧನಾ ಸಿಂಗ್.