ಭೋಪಾಲ್: ವರದಕ್ಷಿಣೆ ಕಿರುಕುಳದ ಕಾರಣಕ್ಕೆ ಇತ್ತೀಚೆಗೆ ಪತಿಯ ಮನೆಯಲ್ಲಿ ಆತ್ಮ*ತ್ಯೆಗೆ ಶರಣಾದ ತ್ವಿಶಾ ಶರ್ಮಾಳ ಅತ್ತೆ, ನಿವೃತ್ತ ನ್ಯಾ. ಗಿರಿಬಾಲಾ ಸಿಂಗ್ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಭೋಪಾಲ್‌ನ ಬಾಗ್ ಮುಘಲಿಯಾ ಪ್ರದೇಶದ ನಿವಾಸದಿಂದ ಬಂಧಿಸಲಾಗಿದೆ
ಭೋಪಾಲ್‌ನ ಬಾಗ್ ಮುಘಲಿಯಾ ಪ್ರದೇಶದ ನಿವಾಸದಿಂದ ನ್ಯಾ. ಗಿರಿಬಾಲಾರನ್ನು ಬಂಧಿಸಲಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ವಜಾಗೊಳಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಮೇ 12ರಂದು ತ್ವಿಶಾ ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದರು
ಮೇ 12ರಂದು ತ್ವಿಶಾ ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಪತಿ ಹಾಗೂ ಅತ್ತೆಯ ವರದಕ್ಷಿಣೆ ಕಿರುಕುಳದಿಂದ ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ನ್ಯಾ. ಗಿರಿಬಾಲಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಳೆದ ವಾರ ಸಿಬಿಐ ಪತಿಯನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಅತ್ತೆಯ ಬಂಧನವಾಗಿದೆ.